ಈಜು ಸ್ಪರ್ಧೆಯಲ್ಲಿ ಉತ್ತಮ ಸಾಧನೆ

2dvk 3
Published on

ಬೆಳಗಾವಿ: ಹಾಸನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಿಬಿಎಸ್​ಇ ದಕ್ಷಿಣ ವಲಯ ಚಾಂಪಿಯನ್​ಶಿಪ್​ನ ಈಜು ಸ್ಪರ್ಧೆಯಲ್ಲಿ ಇಲ್ಲಿನ ಸ್ವಿಮ್ಮರ್ಸ್​ ಕ್ಲಬ್​ ಮತ್ತು ಅಕ್ವಾರಿಯಸ್​ ಸ್ವಿಮ್​ ಕ್ಲಬ್​ನ ಈಜುಪಟುಗಳು 1 ಚಿನ್ನ ಹಾಗೂ ನಾಲ್ಕು ಬೆಳ್ಳಿ ಪದಕಗಳನ್ನು ಗೆದ್ದುಕೊಂಡು, ಸಿಬಿಎಸ್​ಇ ರಾಷ್ಟ್ರಮಟ್ಟದ ಚಾಂಪಿಯನ್​ಶಿಪ್​ಗೆ ಆಯ್ಕೆಯಾಗಿದ್ದಾರೆ.

ಬಟರ್​ ಫ್ಲೆ ಸ್ಟ್ರೊಕ್​ ವಿಭಾಗದಲ್ಲಿ ಜ್ಯೋತಿ ಸೆಂಟ್ರಲ್​ ಸ್ಕೂಲ್​ನ ವೇದಾಂತ ಮೀಸಾಳೆ ಒಂದು ಚಿನ್ನ, ಎರಡು ಬೆಳ್ಳಿ ಪದಕ, ಕೆಎಲ್​ಇ ಪಬ್ಲಿಕ್​ ಶಾಲೆಯ ನಿಧಿ ಕುಲಕರ್ಣಿ ಮತ್ತು ಕೆಎಲ್​ಇ ಇಂಟರ್​ನ್ಯಾಷನಲ್​ ಸ್ಕೂಲ್​ನ ರೇಹಾ ಪೋರವಾಲ್​ ತಲಾ ಒಂದೊಂದು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಕೋಚ್​ ಉಮೇಶ ಕಲಟಗಿ, ಅಕ್ಷಯ ಶೇರೆಗಾರ, ಅಂಜಿಕ್ಯಾ ಮೆಂಡಕೆ, ನಿತೀಶ ಕುಡಚಕರ, ಗೋವರ್ಧನ ಕಾಕತಕರ, ಇಮ್ರಾನ್​ ಉಚಗಾಂವಕರ, ವಿನಾಯಕ ಅಂಬೇವಾಡಿಕರ ಅವರು ಈ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದರು.

ವಿದ್ಯಾರ್ಥಿಗಳ ಸಾಧನೆಗೆ ಕೆಎಲ್​ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಜಯಭಾರತ ಫೌಂಡೇಶನ್​ ಅಧ್ಯಕ್ಷ ಜಯಂತ ಹುಂಬರವಾಡಿ, ಅವಿನಾಶ ಪೋತದಾರ, ಮನಕ್​ ಕಪಾಡಿಯಾ, ಲತಾ ಕಿತ್ತೂರ, ಸುಧೀರ ಕುಸನೆ, ಪ್ರಸಾದ ತೆಂಡೂಲ್ಕರ ಇತರರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net