

ಚಿಕ್ಕೋಡಿ: ಒಂದೂವರೆ ವರ್ಷದ ಮಗುನೊಂದಿಗೆ ಬಾವಿಗೆ ಹಾರಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕುಗಟೊಳ್ಳಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.
ಶಕುಂತಲಾ ಬ್ಯಾಳಿ(31) ಮತ್ತು ಈಕೆಯ ಪುತ್ರ ಭುವನ್ ಬ್ಯಾಳಿ ಮೃತ ದುರ್ದೈವಿಗಳು. ಮನೆಯ ಪಕ್ಕದಲ್ಲಿದ್ದ ಬಾವಿಗೆ ಹಾರಿ ತಾಯಿ ಹಾಗೂ ಮಗು ಸತ್ತಿದ್ದಾರೆ. ಇದನ್ನೂ ಓದಿರಿ ಅಪಘಾತಕ್ಕೀಡಾದವರನ್ನ ಕಾಪಾಡಲು ಓಡೋಡಿ ಬಂದವರ ಪ್ರಾಣವನ್ನೇ ಹೊತ್ತೊಯ್ದ ಜವರಾಯ!
ಏನೂ ಅರಿಯ ಪುಟ್ಟ ಕಂದಮ್ಮನೂ ತಾಯಿ ಜತೆ ಪ್ರಾಣಬಿಟ್ಟಿದ್ದು, ಬಾವಿಯಿಂದ ಇಬ್ಬರ ಶವ ಹೊರ ತೆಗೆಯುತ್ತಿದ್ದಂತೆ ಕುಟುಂಬಸ್ಥರು ಮತ್ತು ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.