ಅಪಘಾತಕ್ಕೀಡಾದವರನ್ನ ಕಾಪಾಡಲು ಓಡೋಡಿ ಬಂದವರ ಪ್ರಾಣವನ್ನೇ ಹೊತ್ತೊಯ್ದ ಜವರಾಯ!

accident
Published on

ದಾವಣಗೆರೆ: ಅಯ್ಯೋ ವಿಧಿಯೇ ನೀನೆಂಥ ಕ್ರೂರಿ ಎಂದು ಶಪಿಸುವಂತೆ ಮಾಡುತ್ತೆ ಈ ಘಟನೆ. ಸಾವು ಯಾವಾಗ? ಯಾವ ರೂಪದಲ್ಲಿ ಬರುತ್ತೆ? ಎಂದು ಊಹಿಸಲು ಸಾಧ್ಯವಿಲ್ಲ ಎಂಬುದಕ್ಕೆ ಚನ್ನಗಿರಿ ತಾಲೂಕಿನ ಗುಳ್ಳಳ್ಳಿ ಕ್ರಾಸ್ ಬಳಿ ಶನಿವಾರ ಸಂಜೆ ನಡೆದ ಭೀಕರ ಅಪಘಾತವೇ ಸಾಕ್ಷಿ.

ಅಪಘಾತಕ್ಕೀಡಾದವರನ್ನ ಉಪಚರಿಸುತ್ತಿದ್ದ ಜನರ ಮೇಲೆ ಜವರಾಯನಂತೆ ಬಂದ ಕ್ಯಾಂಟರ್ ಲಾರಿ ಹರಿದು ಇಬ್ಬರನ್ನ ಬಲಿ ಪಡೆದಿದೆ. ಇದನ್ನೂ ಓದಿರಿ ಪಬ್​ ಜೀ ಆಡಲು ಮೈದಾನಕ್ಕೆ ಹೋದ 12 ವರ್ಷದ ಬಾಲಕ ಭೀಕರ ಹತ್ಯೆ!

ಗುಳ್ಳಳ್ಳಿ ಕ್ರಾಸ್ ಬಳಿ ಇನ್ನೋವಾ ಕಾರು ಮತ್ತು ಬೈಕ್ ನಡುವೆ ಅಪಘಾತವಾಗಿತ್ತು. ಸ್ಥಳದಲ್ಲಿದ್ದ ಸಾರ್ವಜನಿಕರು ಗಾಯಾಳುಗಳನ್ನ ಉಪಚರಿಸುತ್ತಿದ್ದರು. ಈ ವೇಳೆ ಯಮನಂತೆ ಚನ್ನಗಿರಿ ಕಡೆಯಿಂದ ಬಂದ ಕ್ಯಾಂಟರ್ ಲಾರಿ, ಗಾಯಾಳುಗಳನ್ನು ಉಪಚರಿಸುತ್ತಿದ್ದವರ ಮೇಲೆ ಹರಿಯಿತು.

ಸ್ಥಳದಲ್ಲೇ ಸಿದ್ದೀಕ್ ನುಗ್ಗಿಹಳ್ಳಿ (39) ಮೃತಪಟ್ಟಿದ್ದು, ಆಸ್ಪತ್ರೆಗೆ ಸಾಗಿಸುತ್ತಿದ್ದ ಮಾರ್ಗಮಧ್ಯೆ ಮತ್ತೊಬ್ಬ ಗಾಯಾಳು ಕೊನೆಯುಸಿರು ಎಳೆದರು. ಜಮೀಲ್, ರಿಯಾನ್, ಮುಸ್ತಾಫ್ ತೀವ್ರ ಗಾಯಗೊಂಡಿದ್ದು, ಶಿವಮೊಗ್ಗಕ್ಕೆ ಆಸ್ಪತ್ರೆಗೆ ಸೇರಿಸಲಾಗಿದೆ. ಚನ್ಮಗಿರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net