ಸಿಡಿ ಲೇಡಿ ಮೊಬೈಲ್​ನಲ್ಲಿ ಸಿಕ್ತು ಮಹತ್ವದ ಸಾಕ್ಷ್ಯ! ಜಾರಕಿಹೊಳಿಗೆ ಶುರುವಾಯ್ತು ಗಂಡಾಂತರ

cd case
Published on

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸೆಕ್ಸ್​ ಸಿಡಿ ಪ್ರಕರಣದ 'ಸಂತ್ರಸ್ತ' ಯುವತಿ ಮೊಬೈಲ್​ನಲ್ಲಿ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ನಗರದಲ್ಲಿ ಯುವತಿ ವಾಸವಿದ್ದ ಪಿಜಿಯನ್ನು ಮಹಜರು ಮಾಡಿದ್ದ ವೇಳೆ ಕಪಾಟಿನಲ್ಲಿ ಆಕೆಯ ಮೊಬೈಲ್​ ಸಿಕ್ಕಿತ್ತು. ಪೊಲೀಸರು ಸೀಜ್ ಮಾಡಿದ್ದ ಈ ಮೊಬೈಲ್ ಅನೇಕ ಕಥೆಯನ್ನ ಹೇಳುತ್ತಿದೆ.

ಕೆಲಸದ ಆಮಿಷವೊಡ್ಡಿ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಬಳಿಕ ಮೋಸ ಮಾಡಿದ್ದಾರೆ ಎಂದು ರಮೇಶ್​ ಜಾರಕಿಹೊಳಿ ವಿರುದ್ಧ ಯುವತಿ ಆರೋಪಿಸಿದ್ದಳು. ಇದಕ್ಕೆ ಪುಷ್ಠಿ ನೀಡಿದೆ ಮೊಬೈಲ್​ನಲ್ಲಿನ ಚಾಟಿಂಗ್​. 'ಕೆಲಸ ತಾನೇ.. ಹೇ ಕೊಡ್ಸ್ತಿನಿ ಬಿಡ್' ಅನ್ನೋ ಸಾಕ್ಷಿ ಈಗ ಪತ್ತೆಯಾಗಿದೆ. ಈ ಮೆಸೇಜ್ ಆರೋಪಿ ವಿರುದ್ಧ ದೊಡ್ಡ ಸಾಕ್ಷಿಯಾಗಿದೆ. ಇದು ಮಲ್ಲೇಶ್ವರಂ ಪಿಜಿ ಹೆಸರಿನ ನಂಬರ್​ನಿಂದ ಬಂದಿದೆ.

ಸಿಡಿ ಲೇಡಿಯ ಮೊಬೈಲ್​ನಲ್ಲಿ ವಿಡಿಯೋ ಕಾಲ್, ಇನ್ ಕಮಿಂಗ್ ಕಾಲ್ ಬಂದಿರುವ ಬಗ್ಗೆ ಸ್ಕ್ರೀನ್​ಶಾಟ್ಸ್, ವಿಡಿಯೋ ರೆಕಾರ್ಡ್​ ಪತ್ತೆಯಾಗಿವೆ. ಆ ಮೂಲಕ ಆರೋಪಿಗೂ 'ಸಂತ್ರಸ್ತ' ಯುವತಿಗಿದ್ದ ಸಂಪರ್ಕದ ಸಾಕ್ಷಿಗಳು ಲಭ್ಯವಾಗಿವೆ. ಈ ಸಾಕ್ಷಿಗಳನ್ನು ತನಿಖಾಧಿಕಾರಿ ಕವಿತಾ ಸಂರಕ್ಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net