ಕೃಷಿಹೊಂಡಕ್ಕೆ ಬಿದ್ದು 3 ಮಕ್ಕಳು ಸಾವು, ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ

krushi honda
Published on

ಮಂಡ್ಯ: ಕೃಷಿಹೊಂಡದಲ್ಲಿ ಮುಳುಗಿ ಮೂವರು ಮಕ್ಕಳು ಧಾರುಣವಾಗಿ ಸಾವನ್ನಪ್ಪಿದ ಘಟನೆ ಪಾಂಡವಪುರ ತಾಲೂಕು ಬಳ್ಳೇಅತ್ತಿಗುಪ್ಪೆ ಗ್ರಾಮದಲ್ಲಿ ಇಂದು(ಗುರುವಾರ) ಸಂಭವಿಸಿದೆ.

ಮಹದೇವಪ್ಪರ ಎಂಬುವರ ಮಕ್ಕಳಾದ ಚಂದನ್ ಮತ್ತು ಕಾರ್ತಿಕ್, ಮಲ್ಲಿಕಾರ್ಜುನ ಅವರ ಪುತ್ರ ರೀತೇಶ್ ಮೃತ ದುರ್ದೈವಿಗಳು. ಇದನ್ನೂ ಓದಿರಿ ತಂಗಿಯ ಮೇಲೆ ಅಣ್ಣನಿಂದಲೇ ಅತ್ಯಾಚಾರ ಪ್ರಕರಣ: ದೂರು ನೀಡಿದ ಬೆನ್ನಲ್ಲೇ ಆರೋಪಿ ಆತ್ಮಹತ್ಯೆಗೆ ಶರಣು!

ಶಾಲೆಗೆ ರಜೆ ಇದ್ದಿದ್ದರಿಂದ ಈ ಮೂರು ಮಕ್ಕಳೂ ಬಳ್ಳೇಅತ್ತಿಗುಪ್ಪೆ ಗ್ರಾಮ ಹೊರವಲಯದ ಕೃಷಿಹೊಂಡದಲ್ಲಿ ಈಜಾಟಕ್ಕೆ ಹೋಗಿದ್ದರು ಎನ್ನಲಾಗಿದೆ. ಈ ವೇಳೆ ದುರಂತ ಅಂತ್ಯಕಂಡಿದ್ದು, ಮೂರು ಮಕ್ಕಳ ಮೃತದೇಹವನ್ನ ಸಾಲಾಗಿ ಮಲಗಿಸಿದ್ದ ದೃಶ್ಯ ಕಂಡು ನೆರೆದಿದ್ದವರೂ ಕಣ್ಣೀರಾದರು. ಮೃತ ಮಕ್ಕಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪಾಂಡವಪುರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net