ಬಿಗ್​ ಬಾಸ್​ ಖ್ಯಾತಿಯ ಚೈತ್ರಾ ಕೋಟೂರ್​ ಆತ್ಮಹತ್ಯೆ ಯತ್ನ! ಆಕೆಯ ತಂದೆ ಬಿಚ್ಚಿಟ್ಟ ಕಾರಣ ಇಲ್ಲಿದೆ

chaitra kotoor
Published on

ಕೋಲಾರ: ಬಿಗ್​ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಇಂದು ಬೆಳಗಿನ ಜಾವ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಚೈತ್ರಾ ಸಾಯುವ ನಿರ್ಧಾರ ಮಾಡಿದ್ದರ ಕುರಿತು ಇವರ ತಂದೆ ನಾರಾಯಣಪ್ಪ ಮಾತನಾಡಿದ್ದು, ಗುರುವಾರ ಬೆಳಗ್ಗೆ 5 ಗಂಟೆ ಸುಮಾರಿನಲ್ಲಿ ಕೋಲಾರದ ತಮ್ಮ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ಕೋಲಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದರು. ಇದನ್ನೂ ಓದಿರಿ ಮರಕ್ಕೆ ಕಾರು ಡಿಕ್ಕಿ, ಮೂವರು ಯುವಕರ ದುರ್ಮರಣ

ಮಾ.28ರಂದು ಪ್ರಿಯಕರ ನಾಗಾರ್ಜುನ್ ಜತೆ ಚೈತ್ರಾ ಕೋಟೂರ್ ಮದುವೆಯಾಗಿದ್ದರು. ಅಂದು ಸಂಜೆಯೇ ಪತ್ನಿ ವಿರುದ್ಧ ಪತಿ ಪೊಲೀಸ್​ ಠಾಣೆ ಮೆಟ್ಟಿಲೇರುವ ಮೂಲಕ ನವಜೋಡಿ ಮದುವೆ ವಿವಾದ ಸ್ಫೋಟಗೊಂಡಿತ್ತು. ಮದುವೆ ಬಗ್ಗೆ ತಗಾದೆ ತೆಗೆದ ನಾಗಾರ್ಜುನ್ ಪೋಷಕರು ಮತ್ತು ಚೈತ್ರಾ ಕೋಟೂರ್ ಪೋಷಕರು ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಾಗಾರ್ಜುನ್ ತನ್ನ ಪೋಷಕರೊಂದಿಗೆ ವಾಪಸ್​ ಆಗಿದ್ದರು. ಬಳಿಕ ಮಾತುಕತೆಗೆ ಬರುವುದಾಗಿ ನಾಗಾರ್ಜುನ್ ಮತ್ತು ಪೋಷಕರು ಹೇಳಿದ್ದರು. ಆದರೆ ಅವರು ಬರಲಿಲ್ಲ. ಮದುವೆ ಮಾಡಿಕೊಂಡ ಹುಡುಗ ಕೈಕೊಟ್ಟಿದ್ದಕ್ಕೆ ಬೇಸತ್ತ ಚೈತ್ರಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ನಾರಾಯಣ್​ ಕಣ್ಣೀರು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net