ಸಿಡಿ ಕೇಸ್​ನ ಯುವತಿ ಮನೆಯಲ್ಲಿ ಲಕ್ಷಲಕ್ಷ ಹಣ ಪತ್ತೆ! ಕಿಂಗ್​ಪಿನ್​​ ಮನೆಯಲ್ಲಿ 'ಸ್ವರ್ಣ' ಸಂಪತ್ತು

cd
Published on

ಬೆಂಗಳೂರು: ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸಿಡಿ ಕೇಸ್​ ಪ್ರಕರಣ ಸಂಬಂಧ ಕೆಲವರ ಮನೆ ಮೇಲೆ ಎಸ್​ಐಟಿ ದಾಳಿ ನಡೆಸಿದ್ದ ವೇಳೆ ಮಹತ್ವದ ದಾಖಲೆಗಳು ಮತ್ತು ಲಕ್ಷ ಲಕ್ಷ ಹಣ ಸಿಕ್ಕಿದೆ.

ಸಿಡಿ ಕೇಸ್​ನ ಶಂಕಿತ ಕಿಂಗ್​ಪಿನ್​ ನರೇಶ್​ಗೌಡನ ಮನೆಯಲ್ಲಿ 18.5 ಲಕ್ಷದ 'ಸ್ವರ್ಣ' ಸಂಪತ್ತು ಪತ್ತೆಯಾದರೆ, ಸಿಡಿ ಲೇಡಿ ಮನೆಯಲ್ಲಿ ಲಕ್ಷಾಂತರ ನಗದು ಸಿಕ್ಕಿದೆ. ಸಿಡಿಯಲ್ಲಿ ಕಾಣಿಸಿಕೊಂಡಿದ್ದ ಯುವತಿಯ ಮನೆ ಆರ್‌.ಟಿ. ನಗರದಲ್ಲಿದ್ದು, ನಿನ್ನೆ ರಾತ್ರಿ ಎಸ್ಐಟಿ ದಾಳಿ ಮಾಡಿತ್ತು. ಆ ವೇಳೆ 9.2 ಲಕ್ಷ ನಗದು, ಖಾಲಿ ಬಿಯರ್ ಬಾಟಲಿಗಳು, ವೈನ್, ವಿಸ್ಕಿ ಬಾಟಲಿ, ಪ್ಯಾಕ್‌ಗಟ್ಟಲೆ ಕಿಂಗ್ ಸಿಗರೇಟ್‌ ಪತ್ತೆಯಾಗಿದೆ. ಇದನ್ನೂ ಓದಿರಿ ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

ಇನ್ನು ಸಿಡಿ ಕೇಸ್​ನ ಶಂಕಿತ ಕಿಂಗ್​ಪಿನ್ ನರೇಶ್​ಗೌಡ ನಿವಾಸದಲ್ಲಿ 18.5 ಲಕ್ಷ ಮೌಲ್ಯಕ್ಕೆ ಚಿನ್ನ ಖರೀದಿ ಮಾಡಿರುವ ರಶೀದಿ, ಮನೆಯಲ್ಲಿ ಲ್ಯಾಪ್​ಟಾಪ್, ಪೆನ್​ಡ್ರೈವ್ ಸೇರಿ ಇತರ ದಾಖಲೆಗಳು ಸಿಕ್ಕಿವೆ. ಪತ್ತೆಯಾದ ಹಣದ ಮೂಲದ ಕುರಿತು ಎಸ್​ಐಡಿ ತನಿಖೆ ನಡೆಸುತ್ತಿದ್ದು, ಸಿಡಿ ಡೀಲ್‌ಗೆ ಯುವತಿ ಹಣ ಪಡೆದಿದ್ದಳಾ? ಅನ್ನೋ ಅನುಮಾನ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net