ವಿಧಾನಸೌಧದ ಮುಂದೆ ಅಪಘಾತ; ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರು ಜಖಂ; ಚಾಲಕನ ತಲೆಸುತ್ತೇ ಆ್ಯಕ್ಸಿಡೆಂಟ್​ಗೆ ಕಾರಣ..

ವಿಧಾನಸೌಧದ ಮುಂದೆ ಅಪಘಾತ; ಚಾಲಕನ ತಲೆಸುತ್ತೇ ಆ್ಯಕ್ಸಿಡೆಂಟ್​ಗೆ ಕಾರಣ.. #CarAccident #BengaluruRoad #Driver - youtube
Published on

ಬೆಂಗಳೂರು: ಮೊನ್ನೆಮೊನ್ನೆಯಷ್ಟೇ ರಾಜಧಾನಿಯಲ್ಲಿ ಕಾರೊಂದು ವಿಭಜಕಕ್ಕೆ ಡಿಕ್ಕಿ ಹೊಡೆದು, ಪಕ್ಕದ ರಸ್ತೆಗೆ ನೆಗೆದು, ಎದುರಿನಿಂದ ಬರುತ್ತಿದ್ದ ಇನ್ನೊಂದು ಕಾರಿನ ಮೇಲೆ ಬಿದ್ದು ಪಲ್ಟಿಯಾಗಿ ಅದರಲ್ಲಿದ್ದ ಮೂವರ ಸಾವಿಗೆ ಕಾರಣವಾಗಿತ್ತು.

ವಿಧಾನಸೌಧದ ಮುಂದೆಯೂ ಇಂದು ಕಾರೊಂದು ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಚಾಲಕನಿಗೆ ತಲೆಸುತ್ತು ಬಂದು ದಿಗ್ಭ್ರಾಂತನಾದ್ದರಿಂದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಆದರೆ ಅದೃಷ್ಟವಶಾತ್, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕಾರಿನಲ್ಲಿದ್ದ ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಸಂಭಾವ್ಯ ಅನಾಹುತ ತಪ್ಪಿಹೋಗಿದೆ. ಆದರೆ ಕಾರು ಗುದ್ದಿದ ರಭಸಕ್ಕೆ ವಿಭಜಕಕ್ಕೆ ಹಾನಿಯಾಗಿದ್ದು, ಕಾರು ಕೂಡ ಜಖಂಗೊಂಡಿದೆ. ಕಬ್ಬನ್​ಪೇಟೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net