

ಹಾವೇರಿ: ಸಾರಿಗೆ ಸಂಸ್ಥೆಯ ಬಸ್ ಚಾಲಕರೊಬ್ಬರು ಛತ್ರಿ ಹಿಡಿದುಕೊಂಡು ಬಸ್ ಚಲಾಯಿಸುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇದು ಶಕ್ತಿ ಯೋಜನೆಯ ಎಫೆಕ್ಟ್ ಇರಬಹುದಾ? ಎಂದು ಸಾರ್ವಜನಿಕರು ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ.
ದುರಸ್ತಿಗೆ ಒಳಗಾಗಿರುವ ಸಾರಿಗೆ ಬಸ್ನಲ್ಲಿ ನೀರು ಸೋರುತ್ತಿದೆ. ಹಾಗಾಗಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ (ವಾ.ಕ.ರ.ಸಾ) ಸಂಸ್ಥೆಯ ಬಸ್ನ ಚಾಲಕ ರಭಸವಾಗಿ ಸುರಿಯುತ್ತಿರುವ ಮಳೆಯಲ್ಲಿ ಛತ್ರಿ ಹಿಡಿದು ಬಸ್ ಚಲಾಯಿಸಿರುವುದು ದೃಶ್ಯದಲ್ಲಿ ಕಂಡುಬಂದಿದೆ.
ಈ ದೃಶ್ಯವನ್ನು ಬಸ್ನಲ್ಲಿದ್ದ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ, ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ. ಹಾಗಾಗಿ, ಸಾರಿಗೆ ಬಸ್‌ಗಳ ದುರಸ್ತಿಗೆ ಹಣವಿಲ್ಲ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.