ಚಾಲಕನ ನಿಯಂತ್ರಣ ತಪ್ಪಿ ನಿರ್ವಾಹಕನಿಗೆ ಗುದ್ದಿದ ಬಸ್​; ತುಂಡು ತುಂಡಾದ ದೇಹ

bus accident
Published on

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಬಿಎಂಟಿಸಿ ಬಸ್​ ನಿರ್ವಾಹಕನಿಗೆ ಗುದ್ದಿದ ಕಾರಣ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ಯಲಹಂಕ ಬಸ್​ ಡಿಪೋದಲ್ಲಿ ನಡೆದಿದೆ.

ನಿರ್ವಾಹಕ ಸೋಮಪ್ಪ ಮೃತ ದೂರ್ದೈವಿ ಎಂದು ತಿಳಿದು ಬಂದಿದ್ದು ಇವರು 402b/10 ನಂಬರ್ ಬಸ್​ನ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ತುಂಡು ತುಂಡಾದ ದೇಹ

ಇನ್ನು ಚಾಲಕನ ನಿಯಂತ್ರಣ ತಪ್ಪಿ​ ವೇಗವಾಗಿ ಬಸ್​ ಬಂದು ಗೋಡೆಗೆ ಗುದ್ದಿ ಪರಿಣಾಮ ನಿರ್ವಾಹಕ ಸೋಮಪ್ಪ ಇದೆರಡರ ನಡುವೆ ಸಿಲುಕಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

BMTC Bus Accident

 ಬಸ್‌ ನಿಲ್ದಾಣದಲ್ಲಿ ಟಿಟಿಗೆ ಸಂಗ್ರಹವಾದ ಟಿಕೆಟ್​ ಹಣವನ್ನು ನೀಡಿ ವಾಪಸ್​ ಆಗುತ್ತಿದ್ದ ವೇಳೆ ಘಟನೆ ನಡೆದಿದ್ದು ಬಸ್​ ಗುದ್ದಿದ ರಭಸಕ್ಕೆ ನಿರ್ವಾಹಕನ ದೇಹದ ಅಂಗಾಂಗಗಳು ಛಿದ್ರವಾಗಿದೆ.

ಪೊಲೀಸರಿಂದ ಸ್ಥಳ ಪರಿಶೀಲನೆ

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆದಿ ಬಿಎಂಟಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

ಸೋಮಪ್ಪ ಅವರ ಮೃತದೇಹವನ್ನು ಮರಣೊತ್ತರ ಪರೀಕ್ಷೆಗೆ ಪೊಲೀಸರು ಕಳುಹಿಸಿದ್ದು ಕುಟುಂಬರ್ಸತರಿಗೆ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net