ಸಿನಿಮಾ

ರಾಜ್ಯ ವಿಧಾನಸಭೆ ಚುನಾವಣೆಗೆ ಖಾಕಿ ಕಣ್ಗಾವಲು, ತಪ್ಪದೇ ಮತದಾನ ಮಾಡಿ: ಅಲೋಕ್​ ಕುಮಾರ್​

ಬೆಂಗಳೂರು: ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ಬಂದೋಬಸ್ತ್ ಮಾಡಲಾಗಿದ್ದು, ಬುಧವಾರ ಗಡಿ ಭಾಗಗಳಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗುವುದು ಎಂದು ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ಮತ್ತು ಬುಧವಾರ ರಾಜ್ಯದ ಎಲ್ಲಾ 185 ಚೆಕ್ ಪೋಸ್ಟ್‌ಗಳಲ್ಲಿ ಭಾರೀ ಭದ್ರತೆ ಇರಲಿದ್ದು ರಾಜ್ಯದ ಎಲ್ಲಾ ಎಸ್.ಪಿ ಹಾಗೂ ಕಮೀಷನರ್‌ಗಳು ರಾತ್ರಿ ಗಸ್ತು ಮಾಡಲಿದ್ದಾರೆ.

ಹೊರ ರಾಜ್ಯಗಳಿಂದ ರಾಜ್ಯ ಪ್ರವೇಶಿಸುವವರಿಗೆ ಪರಿಶೀಲನೆ ನಡೆಸಿ ಪ್ರವೇಶಕ್ಕೆ ಅನುಮತಿ ನೀಡಲಾಗುವುದು. ವಿನಾಕಾರಣ ಬೇರೆ ರಾಜ್ಯದಿಂದ ಬರುವಂತಿಲ್ಲ. ಯಾವುದೇ ನಕಲಿ ಮತದಾನ ಆಗದಂತೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗಿದ್ದು, ಎಲ್ಲಾ ಜಿಲ್ಲೆಗಳ ಎಸ್.ಪಿಗಳಿಗೂ ನಿರ್ದೇಶನ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ, ಹಿಂದೆಂದೂ ಕೈಗೊಳ್ಳದಷ್ಟು ಭಾರಿ ಭದ್ರತೆ: ಅಲೋಕ್​ ಕುಮಾರ್​

230 ಕೋಟಿ ರೂಪಾಯಿ ಜಪ್ತಿ

ರಾಜ್ಯಾದ್ಯಂತ ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ 2,896 ಎಫ್ಐಆರ್​ಗಳು ದಾಖಲಾಗಿದ್ದು 53 ಕೋಟಿ ರೂಪಾಯಿ ಹಣವನ್ನು ಚುನಾವಣಾ ನೀತಿ ಸಂಹಿತೆ ಜಾರಿಗೂ ಮುನ್ನವೇ ವಶಕ್ಕೆ ಪಡೆಯಲಾಗಿದೆ.

ಇದುವರೆಗೂ ಶಿವಮೊಗ್ಗ, ಮಂಗಳೂರು, ಬೆಳಗಾವಿ ಸೇರಿ ಹಲವೆಡೆ ಒಟ್ಟು 230 ಕೋಟಿ ರೂ. ಹಣವನ್ನು ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ADGP Alok kumat Speaking With press

ಮತದಾನದ ದಿನದಂದು 1.56ಲಕ್ಷ ಪೊಲೀರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. 464 ಪ್ಯಾರಾಮಿಲಿಟರಿ ಪೋರ್ಸ್‌ಗಳು ಬಂದಿದೆ. 304 ಡಿವೈಎಸ್ಪಿ, 991 ಇನ್‌ಸ್ಪೆಕ್ಟರ್‌ಗಳು ಸೇರಿ ಒಟ್ಟು 84 ಸಾವಿರ ಪೊಲೀಸರಿಂದ ಬಂದೋಬಸ್ತ್ ಇರಲಿದೆ. 185 ಬಾರ್ಡರ್ ಚೆಕ್ ಪೋಸ್ಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳಲ್ಲಿ ಸಿಆರ್‌ಪಿಎಫ್​, ಸಿಎಎಫ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ತಪ್ಪದೇ ಮತದಾನ ಮಾಡಿ

ಪ್ರಜಾಪ್ರಭುತ್ವದಲ್ಲಿ ಮತದಾನ ಪ್ರಮುಖ ಪ್ರಕ್ರಿಯೆಯಾಗಿದೆ. ಆದ್ದರಿಂದ ಮೇ 10ರಂದು ಎಲ್ಲರೂ ಸಹ ತಪ್ಪದೇ ಮತದಾನ ಮಾಡಿ.

ಪೊಲೀಸ್ ಸಿಬ್ಬಂದಿಗಳಿರಲಿ, ಮಾಧ್ಯಮ ಮಿತ್ರರಿಗೂ ಸಹ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿವುದು. ತಪ್ಪದೇ ಮತದಾನ ಮಾಡಿ ಎಂದು ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಕರೆ ನೀಡಿದ್ದಾರೆ.

Latest Posts

ಲೈಫ್‌ಸ್ಟೈಲ್