ಮೆಟ್ರೋ ರೈಲಿನೊಳಗೆ ಹುಚ್ಚಾಟಕ್ಕೆ ದಂಡ ತೆತ್ತ ವಿದ್ಯಾರ್ಥಿಗಳು; ಅಶಿಸ್ತು ತೋರಿದವರಿಗೆ ಎಚ್ಚರಿಕೆ

metro
Published on

ಬೆಂಗಳೂರು: ನಮ್ಮ ಮೆಟ್ರೋ ರೈಲಿನೊಳಗೆ ಪ್ರಯಾಣದ ವೇಳೆ ಸರಳುಗಳನ್ನು ಹಿಡಿದುಕೊಂಡು ರೋಲಿಂಗ್​ ವ್ಯಾಯಾಮ ಮಾಡಿದ್ದ ಮೂವರು ವಿದ್ಯಾರ್ಥಿಗಳಿಗೆ ಮೆಟ್ರೋ ಸಿಬ್ಬಂದಿ ದಂಡ ವಿಧಿಸಿದ ಘಟನೆ ಸೆಪ್ಟೆಂಬರ್ 17ರಂದು ನಡೆದಿದೆ.

ರಾತ್ರಿ 11 ಗಂಟೆ ಸುಮಾರಿಗೆ ವಿದ್ಯಾರ್ಥಿಗಳು ಹಸಿರು ಮಾರ್ಗದ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ರೈಲಿನೊಳಗೆ ರೋಲಿಂಗ್​ ವ್ಯಾಯಾಮ ಮಾಡುತ್ತಾ ಅಶಿಸ್ತು ತೋರಿದ್ದಾರೆ. ವಿದ್ಯಾರ್ಥಿಗಳ ವರ್ತನೆಯನ್ನು ಮೆಟ್ರೋ ಸಿಬ್ಬಂದಿಯೊಬ್ಬರು ವೀಡಿಯೋ ಮಾಡಿ, ಭದ್ರತಾ ಸಿಬ್ಬಂದಿಗಳಿಗೆ ರವಾನಿಸಿದ್ದರು.

ಕೂಡಲೇ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ಹಾಗೂ ಹೋಂ ಗಾರ್ಡ್​ ಸಿಬ್ಬಂದಿ ಯಲಚೇನಹಳ್ಳಿ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗೆ ತಲಾ 500 ರೂ. ದಂಡ ವಿಧಿಸಿದ್ದಾರೆ. ಜತೆಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಬಿಎಂಆರ್​ಸಿಎಲ್​ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net