More

    ಪ್ರಸಕ್ತ ವರ್ಷದಲ್ಲಿ ಮದುವೆಯಿಂದ ರೂ.4.25 ಲಕ್ಷ ಕೋಟಿ ವ್ಯವಹಾರದ ನಿರೀಕ್ಷೆ!

    ನವದೆಹಲಿ: ದೇಶದಾದ್ಯಂತ ಈ ವರ್ಷದ ಮದುವೆಯ ಸೀಸನ್​ನಲ್ಲಿ ಸುಮಾರು 35 ಲ ವಿವಾಹಗಳು ನಡೆಯುವ ನಿರೀಕ್ಷೆಯಿದೆ. ಮದುವೆಯ ಶಾಪಿಂಗ್​ನಿಂದ ಹಿಡಿದು ಮದುವೆಗಳಲ್ಲಿ ಅಗತ್ಯ ಸೇವೆಗಳವರೆಗೆ ಈ ಸೀಸನ್​ನಲ್ಲಿ 4.25 ಲಕ್ಷ ಕೋಟಿ ರೂಪಾಯಿ ವ್ಯವಹಾರ ನಡೆಯಲಿದೆ ಎಂದು ಅಂದಾಜಿಸಲಾಗಿದೆ.

    ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಟಿ) ಅಂಕಿ&ಅಂಶವನ್ನು ಬಿಡುಗಡೆ ಮಾಡಿದೆ. ಸಿಎಟಿ ಸಂಶೋಧನೆ ಮತ್ತು ವ್ಯಾಪಾರ ಅಭಿವೃದ್ಧಿ ಸೊಸೈಟಿ ಇತ್ತೀಚೆಗೆ ದೇಶದ 20 ಪ್ರಮುಖ ನಗರಗಳ ವ್ಯಾಪಾರಿಗಳು ಮತ್ತು ಸೇವಾ ಪೂರೈಕೆದಾರರ ನಡುವೆ ಸಮೀಕ್ಷೆ ನಡೆಸಿದೆ ಎಂದು ಸಿಎಟಿ ಪ್ರಧಾನ ಕಾರ್ಯದರ್ಶಿ ಪ್ರವಿಣ್​ ಖಂಡೇಲ್ವಾಲ್​ ಹೇಳಿದ್ದಾರೆ.

    ಸಮೀಕ್ಷೆ ಪ್ರಕಾರ ರಾಜಧಾನಿ ದೆಹಲಿಯಲ್ಲಿ ಈ ಸೀಸನ್​ನಲ್ಲಿ 3.5 ಲಕ್ಕೂ ಹೆಚ್ಚು ಮದುವೆಗಳು ನಡೆಯುವ ನಿರೀಕ್ಷೆ ಇದ್ದು, ಈ ಮೂಲಕ ದೆಹಲಿಯಲ್ಲಿ ಸುಮಾರು 1 ಲಕ್ಷ ಕೋಟಿ ರೂಪಾಯಿ ವ್ಯವಹಾರ ನಡೆಯುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts