More

    ಮಾದಕವಸ್ತು ಸಾಗಿಸುತ್ತಿದ್ದ ಆಫ್ರಿಕನ್​ ಮಹಿಳೆಯರು ಅಂದರ್; ಸ್ಯಾನಿಟರಿ ಪ್ಯಾಡ್​ನಲ್ಲಿತ್ತು 5 ಕೋಟಿ ರೂ. ಮೌಲ್ಯದ ಕೊಕೇನ್​

    ಮುಂಬೈ: ಮಾದಕವಸ್ತು ಕೊಕೇನ್​ ಕಳ್ಳಸಾಗಾಟ ಮಾಡುತ್ತಿದ್ದ ಮೂರು ಆಫ್ರಿಕನ್​ ಮಹಿಳೆಯರನ್ನು ಕಂದಾಯ ಬೇಹುಗಾರಿಕೆ ನಿರ್ದೇಶನಾಲಯ (ಡಿಆರ್​ಐ) ಅಧಿಕಾರಿಗಳು ಮುಂಬೈ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಅವರಿಂದ ವಶಪಡಿಸಿಕೊಂಡ ಕೊಕೇನ್​ ಮೌಲ್ಯ 5.68 ಕೋಟಿ ರೂಪಾಯಿ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸ್ಯಾನಿಟರಿ ನ್ಯಾಪ್​ಕಿನ್​ಗಳಲ್ಲಿ ಅಡಗಿಸಿಟ್ಟು ಹಾಗೂ ಕ್ಯಾಪ್ಸೂಲ್​ ರೂಪದಲ್ಲಿ ಸೇವಿಸುವ ಮೂಲಕ ಅವರು ಈ ಮಾದಕದ್ರವ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ನಿರ್ದಿಷ್ಟ ಗುಪ್ತಚರ ಮಾಹಿತಿ ಆಧಾರದಲ್ಲಿ ಡಿಆರ್​ಐ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

    ಬಂಧಿತರ ಪೈಕಿ ಉಗಾಂಡಾದ ಇಬ್ಬರು ಮಹಿಳೆಯರು ನ್ಯಾಪ್​ಕಿನ್​ಗಳಲ್ಲಿ ಕೊಕೇನ್​ ಅಡಗಿಸಿಟ್ಟುಕೊಂಡಿದ್ದರು. ತಾಂಜಾನಿಯಾದ ಹೆಂಗಸು, ಕೊಕೇನ್​ ಇದ್ದ ಕ್ಯಾಪ್ಸೂಲ್​ ನುಂಗಿದ್ದಳು ಎಂದು ಅಧಿಕಾರಿಗಳು ಹೇಳಿದ್ದಾರೆ. ನಕೋರ್ಟಿಕ್​ ಡ್ರಗ್ಸ್​ ಮತ್ತು ಸೈಕೋಟ್ರಾಫಿಕ್​ ಸಬ್​ಸ್ಟನ್ಸಸ್​ (ಎನ್​ಡಿಪಿಎಸ್​) ಕಾನೂನಿನ ವಿವಿಧ ಸೆಕ್ಷನ್​ಗಳನ್ವಯ ಕೇಸ್​ ದಾಖಲಿಸಲಾಗಿದ್ದು ಆರೋಪಿಗಳನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts