More

    ಇಸ್ರೇಲ್​ ವೈಮಾನಿಕ ದಾಳಿಯಲ್ಲಿ ಹಮಾಸ್​ ವಾಯುಪಡೆಯ ಮುಖ್ಯಸ್ಥ ಸಾವು

    ಜೆರುಸಲೇಂ: ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್​) ರಾತ್ರೋರಾತ್ರಿ ನಡೆಸಿದ ವಾಯುದಾಳಿಯಲ್ಲಿ ಪ್ಯಾಲೆಸ್ತೀನ್​ನ ಹಮಾಸ್​ ಗುಂಪಿನ ಹಿರಿಯ ಸದಸ್ಯ ಬಲಿಯಾಗಿರುವುದಾಗಿ ದಿ ಟೈಮ್ಸ್​ ಆಫ್​ ಇಸ್ರೇಲ್​ ವರದಿ ಮಾಡಿದೆ.

    ಇಸ್ರೇಲ್ ರಕ್ಷಣಾ ಪಡೆಯ ಪ್ರಕಾರ ವಾಯುದಾಳಿಯಲ್ಲಿ ಹಮಾಸ್​ ವಾಯುಸೇನೆಯ ಮುಖ್ಯಸ್ಥ ಮುರಾದ್​ ಅಬು ಮುರಾದ್​ ಹತನಾಗಿದ್ದಾನೆ. ವಾಯುದಾಳಿ ಚಟುವಟಿಕೆ ನಡೆಸುತ್ತಿದ್ದ ಹಮಾಸ್​ನ ಮುಖ್ಯಕಚೇರಿಯನ್ನು ಗುರಿಯಾಗಿಸಿಕೊಂಡು ಇಸ್ರೇಲ್​ ಸೇನೆ ದಾಳಿ ಮಾಡಿದಾಗ ಮುರಾದ್​ ಬಲಿಯಾಗಿದ್ದಾನೆ ಎಂದು ತಿಳಿದುಬಂದಿದೆ.

    ಅ. 7ರ ಶನಿವಾರದಂದು ಮುಂಜಾನೆ ವೇಳೆ ಹಮಾಸ್​ ಉಗ್ರರು ಇಸ್ರೇಲ್​ ಮೇಲೆ 5000 ರಾಕೆಟ್​ಗಳಿಂದ ವಾಯುದಾಳಿ ನಡೆಸಿದ ಸಮಯದಲ್ಲಿ ಭಯೋತ್ಪಾದಕರನ್ನು ನಿರ್ದೇಶಿಸುವಲ್ಲಿ ಮುರಾದ್ ಪ್ರಮುಖ​ ಪಾತ್ರವನ್ನು ವಹಿಸಿದ್ದನು. ಆತನ ನಿರ್ದೇಶನದೊಂದಿಗೆ ಹಮಾಸ್​ ಉಗ್ರರು ಇಸ್ರೇಲ್​ ಒಳಗೆ ನುಸುಳಿದರು ಎಂದು ಟೈಮ್ಸ್ ಆಫ್ ಇಸ್ರೇಲ್ ತಿಳಿಸಿದೆ.

    ರಾತ್ರಿ ನಡೆದ ದಾಳಿಯಲ್ಲಿ ಹಮಾಸ್‌ನ ಕಮಾಂಡೋ ಪಡೆಗಳಿಗೆ ಸೇರಿದ ಡಜನ್​ಗಟ್ಟಲೇ ಸ್ಥಳಗಳನ್ನು ಇಸ್ರೇಲ್​​ ನಾಶ ಮಾಡಿದೆ.

    ಇದನ್ನೂ ಓದಿ: BIGGBOSS KANNADA SEASON 10: ಹಾವುಗಳ ರೋಚಕ ಸಂಗತಿ ಬಿಚ್ಚಿಟ್ಟ ಸ್ನೇಕ್‌ ಶ್ಯಾಮ್‌; ಬೆಕ್ಕಸ ಬೆರಗಾದ ಸ್ಪರ್ಧಿಗಳು

    ಅ.7ರ ಶನಿವಾರದಂದು ಪ್ಯಾಲೆಸ್ತೀನ್​ನ ಹಮಾಸ್​ ಉಗ್ರರು ದಿಢೀರನೇ 5000 ರಾಕೆಟ್​ಗಳಿಂದ ಇಸ್ರೇಲ್​ ಮೇಲೆ ವಿಧ್ವಂಸಕ ದಾಳಿ ಮಾಡಿರುವುದಕ್ಕೆ ಪ್ರತೀಕಾರವಾಗಿ ಇಸ್ರೇಲ್​, ಗಾಜಾ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಇಸ್ರೇಲ್​ ಮತ್ತು ಗಾಜಾ ನಡುವೆ ಯುದ್ಧ ಆರಂಭವಾಗಿ ಒಂದು ವಾರ ಕಳೆದಿದ್ದರೂ ಇನ್ನೂ ಕದನ ಕಾರ್ಮೋಡ ಮಾತ್ರ ತಿಳಿಗೊಂಡಿಲ್ಲ. ಸ್ಥಳೀಯ ಜನರು ಭಯದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಈ ಯುದ್ಧದಲ್ಲಿ ಈಗಾಗಲೇ 3000ಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ. ಹಮಾಸ್​ ಉಗ್ರರಿಂದ ಇಸ್ರೇಲ್​ನ 1300 ಜನರು ಹತರಾದರೆ, ಇಸ್ರೇಲ್​ ದಾಳಿಗೆ ಗಾಜಾದ 1900 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

    24 ಗಂಟೆಯೊಳಗೆ ಉತ್ತರ ಗಾಜಾವನ್ನು ತೊರೆದು ದಕ್ಷಿಣ ಗಾಜಾಗೆ ಸ್ಥಳಾಂತರವಾಗುವಂತೆ ಇಸ್ರೇಲ್​ ನೀಡಿದ್ದ ಗಡುವು ಮುಗಿದ್ದಿದ್ದು, ಸಾವಿರಾರು ಮಂದಿ ಜೀವ ಭಯದಲ್ಲಿ ದಕ್ಷಿಣ ಗಾಜಾ ಕಡೆ ಕಾಲ್ಕಿತ್ತಿದ್ದಾರೆ. ಗಾಜಾ ಪಟ್ಟಿಯ ಒಳಗೆ ನುಗ್ಗಿರುವ ಇಸ್ರೇಲ್​ ಪಡೆಗಳು ಹಮಾಸ್​ ಉಗ್ರರ ಹೆಡೆಮುರಿ ಕಟ್ಟುತ್ತಿದೆ. (ಏಜೆನ್ಸೀಸ್​)

    ಗಾಜಾ ಒಳಗೆ ನುಗ್ಗಿ ಕಾರ್ಯಾಚರಣೆ ಶುರು: ಇಸ್ರೇಲ್​ನಿಂದ ವಿನಾಶಕಾರಿ ಆಕ್ರಮಣದ ಸುಳಿವು,​ ಜೀವ ಭಯದಲ್ಲೇ ನಾಗರಿಕರ ಪಲಾಯನ

    ಇಸ್ರೇಲ್-ಹಮಾಸ್ ಯುದ್ಧ: ‘ನಾನು ಇಲ್ಲೇ ಹುಟ್ಟಿದ್ದೀನಿ, ಇಲ್ಲಿಯೇ ಸಾಯುತ್ತೇನೆ’: ಇಸ್ರೇಲ್​​​​ನ ಈ ನಿರ್ಧಾರಕ್ಕೆ ಯುವಕನ ಪ್ರತಿಕ್ರಿಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts