More

    BIGGBOSS KANNADA SEASON 10: ಹಾವುಗಳ ರೋಚಕ ಸಂಗತಿ ಬಿಚ್ಚಿಟ್ಟ ಸ್ನೇಕ್‌ ಶ್ಯಾಮ್‌; ಬೆಕ್ಕಸ ಬೆರಗಾದ ಸ್ಪರ್ಧಿಗಳು

    ಬೆಂಗಳೂರು: ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್​ ನಡೆಸಿಕೊಡುತ್ತಿರುವ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್​ ಬಾಸ್​ ಇದೀಗ 10ನೇ ಸೀಸನ್​ಗೆ ಕಾಲಿಟ್ಟಿದ್ದು, ಗ್ರ್ಯಾಂಡ್​ ಓಪನಿಂಗ್​ ಮೂಲಕ ಯಶಸ್ವಿಯಾಗಿ ಪ್ರಾರಂಭಗೊಂಡಿದೆ. ಮನೆಗೆ ಎಂಟ್ರಿ ಕೊಟ್ಟಿರುವ ಸದಸ್ಯರ ಪೈಕಿ ಈಗಾಗಲೇ ಕಿರು ಪರಿಚಯದ ಜತೆಗೆ ಮಾತಿನ ಕಿಚ್ಚು ಕೂಡ ಜೋರಾಗಿಯೇ ಆರಂಭಗೊಂಡಿದೆ.

    ಇದನ್ನೂ ಓದಿ: ಲಾಲ್‍ಬಾಗ್​​​ನಲ್ಲಿ ಕೀಟಗಳಿಗೂಂದು ಕೆಫೆ ನಿರ್ಮಾಣ; ‘ಕೀಟ ಕೆಫೆ’ ವಿಶೇಷತೆ ಏನು ಗೊತ್ತಾ?

    ಬಿಗ್​ ಬಾಸ್​ ಮನೆಯಲ್ಲಿ ಸಮರ್ಥರು ಮತ್ತು ಅಸಮರ್ಥರು ಎಂಬ ಎರಡು ಗುಂಪುಗಳನ್ನು ಮಾಡಲಾಗಿದ್ದು, ಈ ಪೈಕಿ ಅಸಮರ್ಥರ ಗುಂಪಿನಲ್ಲಿ ಖ್ಯಾತ ಮೈಸೂರಿನ ಉರಗ ರಕ್ಷಕ ಸ್ನೇಕ್​ ಶ್ಯಾಮ್​ ತಮ್ಮ ವೃತ್ತಿಯ ಜೀವನದಲ್ಲಿ ಹಾವುಗಳ ಪಾತ್ರ ಮತ್ತು ಅವುಗಳ ಕುರಿತಂತೆ ರೋಚಕ ಸಂಗತಿಗಳನ್ನು ಮನೆಯ ಸದಸ್ಯರೊಡನೆ ಹಂಚಿಕೊಂಡಿದ್ದಾರೆ.

    ಸ್ಪರ್ಧಿಗಳೆಲ್ಲ ಸ್ವಿಮಿಂಗ್​ ಪೂಲ್ ಬಳಿ ಕುಳಿತು ಹರಟೆ ಹೊಡೆಯುತ್ತಿದ್ದಾಗ ಹಾವುಗಳ ಕುರಿತಾದ ಹಲವು ರೋಚಕ ಸಂಗತಿಗಳನ್ನು ನಿರರ್ಗಳವಾಗಿ ತೆರೆದಿಟ್ಟ ಸ್ನೇಕ್​ ಶ್ಯಾಮ್​, ಹಾವುಗಳಲ್ಲಿ 45-65 ದಿನಗಳ ಒಳಗೆ ಮೊಟ್ಟೆ ಬೆಳವಣಿಗೆಯಾಗುತ್ತದೆ. ಪ್ರಾಣಿಗಳಲ್ಲಿ ಫೈಟಿಂಗ್ ಆಗೋದು ಈಟಿಂಗ್ ಮತ್ತು ಮೆಟಿಂಗ್ ಎರಡಕ್ಕೇನೇ. ನಮ್ ಥರ ಅಲ್ಲ, ನಾವು ಎಲ್ಲದಕ್ಕೂ ಹೊಡೆದಾಡುತ್ತೇವೆ ಎಂದು ಹೇಳಿದರು.

    ಇದನ್ನೂ ಓದಿ: ಹಿರಿಯರನ್ನು ಗೌರವಿಸಬೇಕು: ತೋಂಟದ ಸಿದ್ಧರಾಮ ಶ್ರೀಗಳು

    ಮೆಟಿಂಗ್ ಮುಗಿದ ಮೇಲೆ ಗಂಡು ಹಾವು ಅದರ ಪಾಡಿಗೆ ಅದು ಹೋಗುತ್ತದೆ. ಹೆಣ್ಣು ಹಾವು ಮೊಟ್ಟೆ ಡೆವಲೆಪ್ ಆದಮೇಲೆ ಸರಿಯಾಗಿರುವ ಜಾಗ ಹುಡುಕಿಕೊಂಡು ಮೊಟ್ಟೆಗಳನ್ನು ಇಡುತ್ತದೆ. ಅದೂ ಟೆಂಪರೇಚರ್ ಸರಿಯಾಗಿರುವ ಜಾಗ ಸಿಗುವ ತನಕ ಕಾಯುತ್ತದೆ. ನಮ್ಮಂತೆ ಒಂಬತ್ತು ತಿಂಗಳಾಯ್ತು, ಹೊಟ್ಟೆ ನೋವು ಶುರುವಾಯ್ತು, ಡಾಕ್ಟರ್ ಹತ್ರ ಹೋಗ್ಬೇಕು ಎಂಬ ರೀತಿ ಮಾಡಲ್ಲ. ಸರಿಯಾದ ಜಾಗ ಸಿಗುವ ತನಕ ಮೊಟ್ಟೆಗಳನ್ನು ಹೊಟ್ಟೆಯಲ್ಲಿ ಇಟ್ಟುಕೊಂಡಿರತ್ತದೆ.

    ಮೊಟ್ಟೆ ಇಟ್ಟಮೇಲೆ ಕೆಲವು ಜಾತಿ ಹಾವುಗಳು ಸುರುಳಿ ಸುತ್ಕೊಂಡು ಮೊಟ್ಟೆ ಮೇಲೆ ಕಾವು ಕೊಡುತ್ತವೆ. ಇನ್ನು ಕೆಲವು ಜಾತಿ ಹಾವುಗಳು ಮೊಟ್ಟೆಗಳನ್ನಿಟ್ಟು ಕಾಯುತ್ತವೆ. ಮೊಟ್ಟೆಯಿಟ್ಟ 45-65 ದಿನಗಳಲ್ಲಿ ಮರಿಗಳು ಈಚೆ ಬರುತ್ತವೆ. ಎಲ್ಲ ಜಾತಿಯ ಹಾವುಗಳು ಮೊಟ್ಟೆಗಳನ್ನು ಇಟ್ಟರೆ ಮೂರು ಜಾತಿಯ ಹಾವುಗಳು ಮರಿಗಳನ್ನು ಹಾಕುತ್ತದೆ. ಅವು ಯಾವುಗಳು ಎಂದರೆ, ಹಸಿರು ಹಾವು, ಮಣ್ಣುಮುಕ್ಕ ಮತ್ತೆ ಮಂಡಲ ಹಾವು. ಈ ಮೂರು ಜಾತಿಯ ಹಾವುಗಳು ಮರಿ ಹಾಕತ್ತದೆ.

    ಇದನ್ನೂ ಓದಿ: ಕನ್ನಹಟ್ಟಿ ಡೇರಿಗೆ ಜೆಡಿಎಸ್ ಬೆಂಬಲಿತರ ಆಯ್ಕೆ: ನೂತನ ವರಿಷ್ಠರನ್ನು ಅಭಿನಂದಿಸಿದ ಮನ್ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರು

    ಆದರೆ ಇವು ಸಸ್ತನಿ ಅಲ್ಲ. ಸಸ್ತನಿ ಅಂದ್ರೆ ಮರಿಗಳನ್ನು ಹಾಕಿ ಮೊಲೆಯೂಣಿಸಬೇಕು. ಈ ಹಾವುಗಳು ಹಾಗೆ ಮಾಡಲ್ಲ. ಒಂದು ವಿಷಯ ಹೇಳಬೇಕು, ಹಾವಿನ ಪ್ರತಿಯೊಂದು ಮರಿಗಳೂ ಸಂಪೂರ್ಣ ಸ್ವಾವಲಂಬಿಗಳಾಗಿರುತ್ತವೆ. ನಮ್ಮಂತೆ ಹುಟ್ಟಿದ ಮೇಲೆ ಬೇರೆಯವರ ಮೇಲೆ ಡಿಪೆಂಡ್ ಆಗಿರುವುದಿಲ್ಲ. ಅವರ ಪಾಡಿಗೆ ಅವು ತಮ್ಮ ಆಹಾರವನ್ನು ಹುಡುಕಿಕೊಂಡು ಹೋಗುತ್ತಿರುತ್ತವೆ. ತಾಯಿ-ತಂದೆಯ ಮೇಲೆ ಅವಲಂಬನೆ ಮಾಡುವುದೇ ಇಲ್ಲ.

    ಎಲ್ಲ ಜಾತಿಯ ಹಾವುಗಳಲ್ಲಿಯೂ ಗಂಡು ಹಾವು ಇದೆ. ಆದರೆ ಒಂದು ಜಾತಿಯ ಹಾವುಗಳಲ್ಲಿ ಗಂಡುಹಾವು ಇಲ್ಲ. ಹೆಣ್ಣು ಹಾವೇ ಸೆಲ್ಫ್‌ ರಿಪ್ರೊಡಕ್ಷನ್ ಮಾಡಿಕೊಳ್ಳುತ್ತದೆ. ಆ ಜಾತಿಯ ಹಾವುಗಳನ್ನು ನೀವೆಲ್ಲರೂ ನೋಡಿರುತ್ತೀರಿ. ಎಲ್ಲರ ಮನೆಯ ಅಡುಗೆ ಮನೆ, ಬಚ್ಚಲ ಮನೆ, ಟಾಯ್ಲೆಟ್‌ನಲ್ಲೆಲ್ಲ ಓಡಾಡ್ತಿರುತ್ತೆ, ಪಿಣಿಪಿಣಿಪಿಣಿ ಅಂತ… ಎರೆಹುಳದ ಥರ ಇರತ್ತೆ. ಅದು ಭಾರತದಲ್ಲಿನ ಅತಿ ಸಣ್ಣ ಹಾವು. ಅದು ರಿಪ್ರೊಡಕ್ಷನ್‌ ಅನ್ನು ಅದೇ ಮಾಡಿಕೊಳ್ಳುತ್ತದೆ.

    ಇದನ್ನೂ ಓದಿ: ʻಯಶಸ್ವಿನಿ’: ನಾರಿ ಶಕ್ತಿಯ ಸಂದೇಶವನ್ನು ಹರಡಲು ʻCRPF ಮಹಿಳಾ ಬೈಕ್‌ ಯಾತ್ರೆ’; ಬೆಂಗಳೂರು ತಲುಪಿದ ಸವಾರರಿಗೆ ಗೌರವ

    ಎಲ್ಲ ಜಾತಿಯ ಹಾವುಗಳೂ ಬಿಲಗಳಲ್ಲಿ, ಪೊಟರೆಗಳಲ್ಲಿ ಮೊಟ್ಟೆ ಇಟ್ಟರೆ, ಒಂದೇ ಒಂದು ಜಾತಿಯ ಹಾವು ಗೂಡನ್ನು ಕಟ್ಟಿ ಮೊಟ್ಟೆ ಇಡುತ್ತದೆ. ಎಲೆಗಳಿಂದ ಗೂಡು ಕಟ್ಟಿ ಮೊಟ್ಟೆ ಇಡುತ್ತದೆ. ಅದು ಕಿಂಗ್ ಕೋಬ್ರಾ!!ಹೀಗೆ ಸ್ನೇಕ್‌ ಶ್ಯಾಮ್‌ ಅವರು ಉರಗ ಪ್ರಪಂಚದ ವಿಸ್ಮಯ, ಕುತೂಹಲಕಾರಿ ಸಂಗತಿಗಳನ್ನು ಆಲಿಸಿದ ಇತರೆ ಸ್ಪರ್ಧಿಗಳು ಬೆಕ್ಕಸ ಬೆರಗಾಗಿದ್ದಾರೆ.

    ಇಸ್ರೇಲ್-ಹಮಾಸ್ ಯುದ್ಧ: ‘ನಾನು ಇಲ್ಲೇ ಹುಟ್ಟಿದ್ದೀನಿ, ಇಲ್ಲಿಯೇ ಸಾಯುತ್ತೇನೆ’: ಇಸ್ರೇಲ್​​​​ನ ಈ ನಿರ್ಧಾರಕ್ಕೆ ಯುವಕನ ಪ್ರತಿಕ್ರಿಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts