More

    ʻಯಶಸ್ವಿನಿ’: ನಾರಿ ಶಕ್ತಿಯ ಸಂದೇಶವನ್ನು ಹರಡಲು ʻCRPF ಮಹಿಳಾ ಬೈಕ್‌ ಯಾತ್ರೆ’; ಬೆಂಗಳೂರು ತಲುಪಿದ ಸವಾರರಿಗೆ ಗೌರವ

    ದೇಶದ ʻನಾರಿ ಶಕ್ತಿʼಯ ಆಚರಣೆಯ ಭಾಗವಾಗಿ, ʻಕೇಂದ್ರೀಯ ಮೀಸಲು ಪೊಲೀಸ್‌ ಪಡೆʼಯು (ಸಿಆರ್‌ಪಿಎಫ್‌) 2023ರ ಅಕ್ಟೋಬರ್ 5 ರಿಂದ ದೇಶದ 3 ಮೂಲೆಗಳಾದ ಕನ್ಯಾಕುಮಾರಿ, ಶ್ರೀನಗರ ಮತ್ತು ಶಿಲ್ಲಾಂಗ್‌ನಿಂದ ʻಸಿಆರ್‌ಪಿಎಫ್‌ ಮಹಿಳಾ ಬೈಕ್ ಯಾತ್ರೆʼಯನ್ನು ಈಗಾಗಲೇ ಆಯೋಜಿಸಿಲಾಗಿದೆ.
    ಬೈಕ್​ ಯಾತ್ರೆ ಪ್ರಾರಂಭಿಸಿರುವ ಮಹಿಳಾ (ಸಿಆರ್‌ಪಿಎಫ್‌) ಅಕ್ಟೋಬರ್​ 13 ರಂದು ಬೆಂಗಳೂರಿಗೆ ತಲುಪಿದ್ದಾರೆ.


    75 ಬೈಕ್ ಸವಾರರು ಮತ್ತು ಹಿಂಬದಿ ಸವಾರರನ್ನು ಒಳಗೊಂಡ ಈ ಯಾತ್ರೆಯು 15 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 121 ಜಿಲ್ಲೆಗಳಲ್ಲಿ ಸಾಗಲಿದೆ ಮತ್ತು ಸುಮಾರು 10000 ಕಿ.ಮೀ ದೂರವನ್ನು ಕ್ರಮಿಸಲಿದೆ.


    ʻನಾರಿ ಶಕ್ತಿʼ, ʻಬೇಟಿ ಬಚಾವೋ ಬೇಟಿ ಪಡಾವೋʼ, ಏಕತೆ, ಸಮಗ್ರತೆ ಮತ್ತು ಮಹಿಳಾ ಸಬಲೀಕರಣದ ಸಂದೇಶವನ್ನು ಹರಡಲಿರುವ ಈ ಯಾತ್ರೆಯು ಗುಜರಾತ್‌ನ ʻಏಕ್ತಾ ನಗರʼದಲ್ಲಿರುವ ವಿಶ್ವಪ್ರಸಿದ್ಧ ಏಕತಾ ಪ್ರತಿಮೆಯ ಬಳಿ ಸಂಪನ್ನಗೊಳ್ಳಲಿದೆ.

    ʻಯಶಸ್ವಿನಿ’: ನಾರಿ ಶಕ್ತಿಯ ಸಂದೇಶವನ್ನು ಹರಡಲು ʻCRPF ಮಹಿಳಾ ಬೈಕ್‌ ಯಾತ್ರೆ'; ಬೆಂಗಳೂರು ತಲುಪಿದ ಸವಾರರಿಗೆ ಗೌರವ


    ಯಾತ್ರೆಯ ವೇಳೆ ಸವಾರರ ತಂಡವು ವಿದ್ಯಾರ್ಥಿನಿಯರು, ಮಹಿಳಾ ಸ್ವಸಹಾಯ ಗುಂಪುಗಳು, ಅಂಗನವಾಡಿ ಕಾರ್ಯಕರ್ತರು, ʻಎನ್‌ಸಿಸಿ ಕೆಡೆಟ್‌ʼಗಳು ಮತ್ತು ಮಹಿಳಾ ಉದ್ಯಮಿಗಳನ್ನು ಭೇಟಿ ಮಾಡಿ ಸಂವಾದ ನಡೆಸಲಿದೆ. ʻಯಶಸ್ವಿನಿʼ ಎಂದು ಕರೆಯಲ್ಪಡುವ ಬೈಕ್ ಸವಾರರು ನಮ್ಮ ರಾಷ್ಟ್ರಧ್ವಜ ಮತ್ತು ಸಿಆರ್‌ಪಿಎಫ್‌ ಧ್ವಜವನ್ನು ಹಿಡಿದುಕೊಂಡು – ʻದೇಶ್ ಕೆ ಹಮ್ ಹೇ ರಕ್ಷಕ್ʼ ಎಂಬ ಸೇನೆಯ ಸಂದೇಶವನ್ನು ಹರಡಲಿದ್ದಾರೆ.


    ಕನ್ಯಾಕುಮಾರಿಯಿಂದ ಏಕ್ತಾ ನಗರದವರೆಗೆ 25 ಬೈಕ್ ಸವಾರರನ್ನು ಒಳಗೊಂಡ 3 ʻಯಶಸ್ವಿನಿʼ ತಂಡಗಳು ಸುಮಾರು 1250 ಕಿ.ಮೀ ಕ್ರಮಿಸಿ ತಿರುವನಂತಪುರಂ, ಮಧುರೈ, ಪಾಂಡಿಚೆರಿ, ಆವಡಿ, ವೆಲ್ಲೂರು, ಕೃಷ್ಣಗಿರಿ ಮತ್ತು ಹೊಸೂರು ಮೂಲಕ ಹಾದು ಅಕ್ಟೋಬರ್​ 12 ರಂದು ಸಂಜೆ ಸಿಆರ್‌ಪಿಎಫ್ ಬೆಂಗಳೂರು ಗ್ರೂಪ್ ಸೆಂಟರ್ ತಲುಪಿದೆ.


    ನಿನ್ನೆ (ಅ.13) ರಂದು ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಹಿಳಾ ಬೈಕ್‌ ಯಾತ್ರೆಯ ತಂಡವನ್ನು ಗೌರವಿಸಲು ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದ್ದು, ಎಲ್ಲಾ ಮಹಿಳಾ ಬೈಕ್​​ ಸವಾರರಿಗೂ ಗೌರವ ಸಲ್ಲಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts