ನವದೆಹಲಿ: ಕೇರಳದ ಫ್ಯಾಕ್ಟರಿಯಿಂದ ಇಸ್ರೇಲ್ ಪೊಲೀಸರಿಗೆ ಸಮವಸ ರವಾನೆಯಾಗುತ್ತಿದೆ. ಈ ಘಟಕದ 1,500 ಉದ್ಯೋಗಿಗಳಲ್ಲಿ ಸುಮಾರು 1,300 ಮಹಿಳೆಯರೇ ಇದ್ದಾರೆ. ಇಸ್ರೇಲ್ ಮಾತ್ರವಲ್ಲ ಇತರ ಹಲವು ದೇಶಗಳಿಗೂ ಇಲ್ಲಿಂದಲೇ ಸಮವಸ್ತ್ರ ರವಾನೆಯಾಗುತ್ತದೆ.
ಕಣ್ಣೂರಿನ ಬೀಡಿ ಉದ್ಯಮ ಬಿಕ್ಕಟ್ಟಿಗೆ ಸಿಲುಕಿದ ನಂತರ ಉದ್ಯೋಗ ಕಳೆದುಕೊಂಡ ಅನೇಕರಿಗೆ ಈ ಸಂಸ್ಥೆಯು ಉದ್ಯೋಗವನ್ನು ಒದಗಿಸಿದೆ. ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಈ ಸಂಸ್ಥೆಯನ್ನು ಮಲಯಾಳಿ ಉದ್ಯಮಿ ಥಾಮಸ್ ಒಲಿಕಲ್ ನಡೆಸುತ್ತಿದ್ದಾರೆ.
ಈ ವರ್ಷವೂ ಇಸ್ರೇಲ್ನ ಪುರುಷ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಗೆ ಸುಮಾರು ಒಂದು ಲ ಸಮವಸಗಳನ್ನು ಪೂರೈಸುವ ಆದೇಶವನ್ನು ಸ್ವೀಕರಿಸಿದ್ದೇವೆ ಎಂದು ಫ್ಯಾಕ್ಟರಿ ಮ್ಯಾನೇಜರ್ ಹೇಳಿದ್ದಾರೆ.
ಇಸ್ರೇಲ್ನಲ್ಲಿ ಅಮೆರಿಕ ಸೇನೆ ನಿಯೋಜನೆ?
ಟೆಲ್ ಅವಿವ್: ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಸಂರ್ಷ ಹೆಚ್ಚುತ್ತಿರುವ ಬೆನ್ನಲ್ಲೇ, ಅಮೆರಿಕ ಮಿಲಿಟರಿ ಎರಡು ಸಾವಿರ ಸೈನಿಕರನ್ನು ಸ್ಟ್ಯಾಂಡ್ಬೈನಲ್ಲಿ ಇರುವಂತೆ ಸೂಚಿಸಿದೆ. ಅಮೆರಿಕ ರಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಈ ಆದೇಶ ನೀಡಿದ್ದು, ಇಸ್ರೇಲ್ನಲ್ಲಿ ಸೇನೆ ನಿಯೋಜನೆಗೆ ಅಮೆರಿಕ ಮುಂದಾಗಿದೆ ಎನ್ನಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಉಂಟಾಗುತ್ತಿರುವ ಭದ್ರತಾ ಸವಾಲುಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗುವಂತೆ ಸೇನೆ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಅಮೆರಿಕದ ರಕ್ಷಣಾ ಸಚಿವಾಲಯ ಹೇಳಿದೆ. ಈ ಪಡೆಗಳು ವೈದ್ಯಕಿಯ ನೆರವು ಮತ್ತು ಸ್ಫೋಟಕಗಳನ್ನು ನಿರ್ವಹಿಸುವಂತಹ ಹಲವು ಕಾರ್ಯಾಚರಣೆಯಲ್ಲಿ ಭಾಗಿಯಾಗಲಿವೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಆದರೆ ತಕ್ಷಣ ಯಾವುದೇ ಪಡೆಗಳನ್ನು ನಿಯೋಜಿಸಲು ನಿರ್ಧಾರ ಮಾಡಲಾಗಿಲ್ಲ ಎಂದು ಅದು ಹೇಳಿದೆ. ಈ ನಡುವೆ ಬುಧವಾರ ಅಮೆರಿಕ ಅಧ್ಯಕ್ಷ ಬೈಡನ್ ಇಸ್ರೇಲ್ ಮತ್ತು ಲೆಬೆನಾನ್ಗೆ ಭೇಟಿ ನೀಡುತ್ತಿದ್ದು, ಮಹತ್ವ ಪಡೆದುಕೊಂಡಿದೆ.