More

    ಇಂಧನ ಕೊರತೆಯಿಂದಾಗಿ 48 ವಿಮಾನಗಳ ಹಾರಾಟ ರದ್ದು ಮಾಡಿದ ಪಾಕಿಸ್ತಾನ

    ಇಸ್ಲಮಾಬಾದ್​: ಪಾಕಿಸ್ತಾನದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದ್ದು, ದೇಶದಲ್ಲಿನ ಇಂಧನ ಕೊರೆತಯಿಂದಾಗಿ ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳು ಸೇರಿದಂತೆ ಒಟ್ಟು 48 ವಿಮಾನಗಳ ಹಾರಾಟವನ್ನು ಪಾಕಿಸ್ತಾನ ಅಂತಾರಾಷ್ಟ್ರೀಯ ಏರ್​ಲೈನ್ಸ್​ (ಪಿಐಎ) ಇಂದು ರದ್ದುಗೊಳಿಸಿದೆ.

    ಈ ಬಗ್ಗೆ ಪಿಐಎ ವಕ್ತಾರರು ದಿ ಡಾನ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ತಮ್ಮ ದೈನಂದಿನ ವಿಮಾನಗಳ ಕಾರ್ಯಾಚರಣೆಯ ಸೀಮಿತ ಇಂಧನ ಪೂರೈಕೆಯಿಂದಾಗಿ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಕೆಲವು ವಿಮಾನಗಳ ನಿರ್ಗಮನವನ್ನು ಮರುನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

    ಇಂಧನದ ಅಲಭ್ಯತೆಯಿಂದಾಗಿ 13 ದೇಶೀಯ ವಿಮಾನಗಳಲ್ಲಿ 11 ಅಂತಾರಾಷ್ಟ್ರೀಯ ವಿಮಾನಗಳನ್ನೂ ರದ್ದುಗೊಳಿಸಲಾಗಿದೆ. ಇತರ ಹನ್ನೆರಡು ವಿಮಾನಗಳು ಸಹ ವಿಳಂಬವಾಗಿವೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ. ವಿಮಾನಗಳು ರದ್ದಾಗುತ್ತಿದ್ದಂತೆ ಅನೇಕ ಪ್ರಯಾಣಿಕರನ್ನು ಪರ್ಯಾಯ ವಿಮಾನಗಳಿಗೆ ಸ್ಥಳಾಂತರಿಸಲಾಗಿದೆ. ಅಲ್ಲದೆ, ಪಿಐಎ ಕಸ್ಟಮರ್​ ಕೇರ್​ಗೆ ಸಂಪರ್ಕಿಸುವಂತೆ ಪ್ರಯಾಣಿಕರಿಗೆ ಸಲಹೆ ನೀಡಿದೆ. ಅಲ್ಲದೆ, ವಿಮಾನ ನಿಲ್ದಾಣಕ್ಕೆ ಬರುವ ಮುನ್ನ ವಿಮಾನದ ಸ್ಟೇಟಸ್​ ತಿಳಿದುಕೊಂಡು ಬರುವಂತೆ ಸೂಚನೆ ನೀಡಿದೆ.

    ಇದನ್ನೂ ಓದಿ: ಮೂಲಸೌಕರ್ಯಕ್ಕೆ 143 ಲಕ್ಷ ಕೋಟಿ ರೂ. ಖರ್ಚು ಮಾಡಲಿದೆ ಭಾರತ: ರೇಟಿಂಗ್ ಏಜೆನ್ಸಿ ಕ್ರಿಸಿಲ್ ಅಭಿಮತ

    ಇಂಧನ ಕೊರತೆ ಏಕೆ?
    ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ್ ಸ್ಟೇಟ್ ಆಯಿಲ್ (PSO) ಇಂಧನ ಪೂರೈಕೆಯನ್ನು ಸ್ಥಗಿತಗೊಳಿಸಿರುವುದರಿಂದ ಈ ಅನಿರೀಕ್ಷಿತ ಬೆಳವಣಿಗೆ ಉಂಟಾಗಿದೆ. ಈಗಾಗಲೇ ಪಾಕ್​ ಆರ್ಥಿಕ ಕುಸಿತದ ಅಂಚಿನಲ್ಲಿದೆ. ಸಾಲ ದುಪ್ಪಟ್ಟಾಗಿರುವುದರಿಂದ ಖಾಸಗೀಕರಣದತ್ತ ಸಾಗುತ್ತಿರುವ ವಿಮಾನಯಾನದ ಭವಿಷ್ಯವು ಕೂಡ ಅನಿಶ್ಚಿತವಾಗಿಯೇ ಉಳಿದಿದೆ. ವಿಮಾನ ಕಾರ್ಯಾಚರಣೆಯ ವೆಚ್ಚಗಳಿಗಾಗಿ 23 ಶತಕೋಟಿ ರೂಪಾಯಿ ಬೆಂಬಲವನ್ನು ನೀಡುವಂತೆ ರಾಷ್ಟ್ರೀಯ ಏರ್‌ಲೈನ್‌ನ ಮನವಿ ಮಾಡಿದರೂ, ಪಾಕ್​ ಸರ್ಕಾರ ಅದನ್ನು ನಿರಾಕರಿಸಿದ್ದರಿಂದ ಪರಿಸ್ಥಿತಿಯೂ ಇನ್ನಷ್ಟು ಉಲ್ಬಣಗೊಂಡಿದೆ.

    ಪಿಎಸ್​ಒಗೆ ಇಂಧನ ಹಣ ಪಾವತಿಸಲು ಪಿಐಎಗೆ ದಿನಕ್ಕೆ 100 ಮಿಲಿಯನ್ ರೂಪಾಯಿ ಅಗತ್ಯವಿದೆ. ಆದರೆ, ಪಿಎಸ್​ಒ ಮುಂಗಡ ನಗದು ಪಾವತಿಗಳಿಗೆ ಮಾತ್ರ ಬೇಡಿಕೆ ಇಟ್ಟಿರುವುದರಿಂದ ಏರ್‌ಲೈನ್​ಗೆ ಈ ಅವಶ್ಯಕತೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಿಎಸ್​ಒ ಇಂಧನ ಪೂರೈಕೆ ಸ್ಥಗಿತಗೊಳಿಸಿದೆ. ಅಲ್ಲದೆ, ಇದು ಭವಿಷ್ಯದಲ್ಲಿ ಹೆಚ್ಚು ಸಂಭಾವ್ಯ ವಿಮಾನ ರದ್ದತಿಗೆ ಕಾರಣವಾಗುವ ಸಾಧ್ಯತೆ ಇದೆ.

    ರಾಜಕೀಯ ಅಸ್ಥಿರತೆಯ ಜತೆಗೆ ಪಾಕಿಸ್ತಾನವು ತನ್ನ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವಾಗಲೇ ವಿಮಾನಗಳ ರದ್ದತಿಯಂತಹ ಇತ್ತೀಚಿನ ಬೆಳವಣಿಗೆ ಸಂಭವಿಸಿದೆ. ದೇಶದಲ್ಲಿ ಪ್ರಸ್ತುತ ಹಣದುಬ್ಬರವು ದಾಖಲೆಯ ಗರಿಷ್ಠ 21.3 ರಷ್ಟು ತಲುಪಿದೆ. ಶೇಕಡದಲ್ಲಿದೆ. ಅಮೆರಿಕದ ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ಮೌಲ್ಯದ ಅರ್ಧದಷ್ಟು ಕಳೆಗುಂದಿದೆ. ದೇಶದ ವಿದೇಶಿ ವಿನಿಮಯ ಮೀಸಲು ಸುಮಾರು 10 ಬಿಲಿಯನ್‌ ಡಾಲರ್​ನಷ್ಟು ಕಡಿಮೆ ಮಟ್ಟದಲ್ಲಿದೆ. (ಏಜೆನ್ಸೀಸ್​)

    ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ; ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್​ಐಆರ್​​

    2027ರ ಹೊತ್ತಿಗೆ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕ ದೇಶವಾಗಲಿದೆ ಎಂದ ಜೇಮ್ಸ್​ ಸುಲ್ಲಿವಾನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts