ಮೂಲಸೌಕರ್ಯಕ್ಕೆ 143 ಲಕ್ಷ ಕೋಟಿ ರೂ. ಖರ್ಚು ಮಾಡಲಿದೆ ಭಾರತ: ರೇಟಿಂಗ್ ಏಜೆನ್ಸಿ ಕ್ರಿಸಿಲ್ ಅಭಿಮತ

infrastructure
Published on

ನವದೆಹಲಿ: ಭಾರತವು 2024 ಮತ್ತು 2030 ರ ನಡುವೆ ಮೂಲಸೌಕರ್ಯಕ್ಕಾಗಿ 143 ಲಕ್ಷ ಕೋಟಿ ರೂ.ಖರ್ಚು ಮಾಡಲಿದೆ, ಇದು 2017 ರಿಂದ ಈಚೆಗೆ ಅಂದರೆ ಕಳೆದ ಏಳು ಹಣಕಾಸು ವರ್ಷಗಳಲ್ಲಿ ಖರ್ಚು ಮಾಡಿದ 67 ಲಕ್ಷ ಕೋಟಿ ರೂ.ಗಿಂತ ಎರಡು ಪಟ್ಟು ಹೆಚ್ಚು ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್ ತಿಳಿಸಿದೆ.

36.6 ಲಕ್ಷ ಕೋಟಿ ರೂ.ಹಸಿರೀಕರಣಕ್ಕೆ ಹೂಡಿಕೆಯಾಗಲಿದ್ದು, 2017-2023ರ ಹಣಕಾಸು ವರ್ಷದಲ್ಲಿ ಖರ್ಚು ಮಾಡಿದ ಮೊತ್ತಕ್ಕೆ ಹೋಲಿಸಿದರೆ ಐದು ಪಟ್ಟು ಏರಿಕೆಯಾಗಿದೆ ಎಂದು ಅದು ಹೇಳಿದೆ.

ಮೂಲಸೌಕರ್ಯ ಅಭಿವೃದ್ಧಿಯ ಮುಂದಿನ ಹಂತವು ಯೋಜನೆಗಳ ಸರಾಸರಿ ಗಾತ್ರ ಮತ್ತು ಸಂಖ್ಯೆ ಹೆಚ್ಚಳದಿಂದ ಗುರುತಿಸಲ್ಪಡುತ್ತದೆ ಎಂದು ರೇಟಿಂಗ್ ಏಜೆನ್ಸಿ ಗಮನಿಸಿದೆ.

ಪ್ರತಿ ವ್ಯಕ್ತಿ ತಲಾ ಆದಾಯವು ಪ್ರಸ್ತುರ 2,500 USD ಇದ್ದು, 2031 ರ ವೇಳೆಗೆ 4,500 USD ಗೆ ಏರುತ್ತದೆ, ತಲಾದಾಯ ಹೆಚ್ಚಿದರೆ ದೇಶದ ಆರ್ಥಿಕ ಪ್ರಗತಿಗೆ ಪೂರಕವಾಗುತ್ತದೆ. ಹೀಗಾಗಿಯೇ ಮೂಲಸೌಕರ್ಯ ವೃದ್ಧಿಯು ಬೃಹತ್ ಪ್ರಮಾಣದಲ್ಲಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ನೆರವಾಗುತ್ತದೆ ಎಂದು ಅದು ಅಭಿಪ್ರಾಯಪಟ್ಟಿದೆ.

`ಇನ್ಫ್ರಾಸ್ಟ್ರಕ್ಚರ್ ಇಯರ್‌ಬುಕ್ 2023' ಅನ್ನು ಬಿಡುಗಡೆ ಮಾಡಿ ಮಾತನಾಡಿದ ಕ್ರಿಸಿಲ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಮಿಶ್ ಮೆಹ್ತಾ, 2031 ರ ಆರ್ಥಿಕ ವರ್ಷದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನವು ಸರಾಸರಿ 6.7 ರಷ್ಟು ಬೆಳವಣಿಗೆಯಾಗಲಿದೆ. ಉತ್ತಮ ಮೂಲಸೌಕರ್ಯದಿಂದ ಹೂಡಿಕೆಯ ವಾತಾವರಣವು ಏರ್ಪಡುತ್ತದೆ. ಪ್ರಮುಖವಾಗಿ ರಸ್ತೆ ಮತ್ತು ಹೆದ್ದಾರಿಗಳು, ವಿದ್ಯುತ್ ಪ್ರಸರಣ, ನವೀಕರಿಸಬಹುದಾದ ಶಕ್ತಿ ಮತ್ತು ಬಂದರುಗಳ ಅಭಿವೃದ್ಧಿ ಕಂಡು ಮುಂದಿನ ದಿನಗಳಲ್ಲಿ ಸುಧಾರಣೆ ಮತ್ತು ಬೆಳವಣಿಗೆಗಳ ವೇಗವನ್ನು ಗಮನಿಸಬಹುದಾಗಿದೆ ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net