More

    20 ವರ್ಷದ ಹಿಂದೆ ‘ಮೃತಪಟ್ಟ’ ಆರೋಪಿ ಬಂಧನ!

    ನವದೆಹಲಿ: 20 ವರ್ಷದ ಹಿಂದೆ ಮೃತಪಟ್ಟಿರುವುದಾಗಿ ವಂಚಿಸಿದ್ದ ಭಾರತೀಯ ನೌಕಾ ಪಡೆಯ ಮಾಜಿ ಉದ್ಯೋಗಿಯೊಬ್ಬನನ್ನು ಮೂರು ಕೊಲೆಗಳ ಆರೋಪದ ಮೇಲೆ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಾಲೇಶ್​ ಕುಮಾರ್​ (60) ಎಂಬ ಹೆಸರಿನ ಈ ವ್ಯಕ್ತಿ ಅಮನ್​ ಸಿಂಗ್​ ಎಂದು ಹೆಸರು ಬದಲಾಯಿಸಿಕೊಂಡು ನಜ್​ಗಢದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಆ ಮನೆಯಿಂದಲೇ ಆತನನ್ನು ಬಂಧಿಸಲಾಗಿದೆ. ಒಂದು ಕೊಲೆ ಹಾಗೂ ಇಬ್ಬರನ್ನು ಜೀವಂತ ಸುಟ್ಟು ಹಾಕಿದ ಆರೋಪ ಬಾಲೇಶ್​ ಮೇಲಿದೆ. ಬಾಲೇಶ್​ 40 ವರ್ಷದವನಿದ್ದಾಗ ತನ್ನ ಭಾವ ರಾಜೇಶ್​ ಆಲಿಯಾಸ್​ ಖುಷಿರಾಂ ಎಂಬಾತನನ್ನು ಕೊಲೆ ಮಾಡಿದ್ದ. ಹಣಕಾಸಿನ ವಿಚಾರವಾಗಿ 2004ರಲ್ಲಿ ದೆಹಲಿಯ ಬವಾನಾ ಪ್ರದೇಶದಲ್ಲಿ ಈ ಕೊಲೆ ನಡೆದಿತ್ತು. ಆತ ರಾಜೇಶ್​ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎಂದೂ ಹೇಳಲಾಗಿತ್ತು. ರಾಜೇಶ್​ ಕೊಲೆಯಲ್ಲಿ ಒಳಗೊಂಡಿದ್ದ ಬಾಲೇಶ್​ ಸೋದರ ಸುಂದರ್​ ಲಾಲ್​ನನ್ನು ಪೊಲೀಸರು 2004ರಲ್ಲಿ ಬಂಧಿಸಿದ್ದರು.

    ಆದರೆ, ಬಾಲೇಶ್​ ಪೊಲೀಸರಿಂದ ತಪ್ಪಿಸಿಕೊಂಡಿದ್ದ. ಆಗ ಸಾರಿಗೆ ವ್ಯವಹಾರ ನಡೆಸುತ್ತಿದ್ದ ಬಾಲೇಶ್​ ಒಂದು ಟ್ರಕ್​ನಲ್ಲಿ ರಾಜಸ್ಥಾನಕ್ಕೆ ಪಲಾಯನ ಮಾಡಿದ್ದ. ಅಲ್ಲಿ ಟ್ರಕ್​ಗೆ ಬೆಂಕಿ ಹಚ್ಚಿ ತನ್ನ ಇಬ್ಬರು ಕಾರ್ಮಿಕರನ್ನು ಸುಟ್ಟು ಹಾಕಿದ್ದ. ಮೃತರಲ್ಲಿ ಒಬ್ಬಾತ ಬಾಲೇಶ್​ ಎಂದು ರಾಜಸ್ಥಾನ ಪೊಲೀಸರು ನಿರ್ಧರಿಸಿದ್ದರು ಎಂದು ವಿಶೇಷ ಪೊಲೀಸ್​ ಕಮಿಷನರ್​ (ಕೆಂ) ರವೀಂದ್ರ ಯಾದವ್​ ಹೇಳಿದ್ದಾರೆ. ಹೀಗಾಗಿ ರಾಜೇಶ್​ ಕೊಲೆಯ ಪ್ರಮುಖ ಶಂಕಿತ ಮೃತಪಟ್ಟಿದ್ದಾನೆಂದು ಪ್ರಕರಣವನ್ನು ಅಂತ್ಯಗೊಳಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts