More

    ಇನ್ಮುಂದೆ ಅನುಮತಿಯಿಲ್ಲದೆ ಕಾಲ್​ ರೆಕಾರ್ಡ್​ ಮಾಡುವುದು ಕಾನೂನು ಉಲ್ಲಂಘನೆ!

    ಬಿಲಾಸಪುರ: ಸಂಬಂಧಿತ ವ್ಯಕ್ತಿಯ ಅನುಮತಿಯಿಲ್ಲದೆ ದೂರವಾಣಿ ಸಂಭಾಷಣೆ ರೆಕಾರ್ಡ್​ ಮಾಡುವುದು ಸಂವಿಧಾನದ ಪರಿಚ್ಛೇದ 21ರ ಅಡಿಯಲ್ಲಿ ಖಾಸಗಿತನದ ಹಕ್ಕಿನ ಉಲ್ಲಂಘನೆ ಎಂದು ಛತ್ತೀಸ್​ಗಢ ಹೈಕೋರ್ಟ್​ ತೀರ್ಪು ನೀಡಿದೆ.

    ಪ್ರಕರಣದ ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ರಾಕೇಶ್​ ಮೋಹನ್​ ಪಾಂಡೆ ಅವರಿದ್ದ ಪೀಠವು 2021ರ ಅಕ್ಟೋಬರ್​ 21ರಂದು ಮಹಾಸಮುಂಡ್​ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ರದ್ದುಗೊಳಿಸುವ ಸಂದರ್ಭದಲ್ಲಿ ಈ ಆದೇಶ ನೀಡಿದೆ.

    ವಿವರ

    ಛತ್ತೀಸ್​ಗಢ ಹೈಕೋರ್ಟ್​ ಜೀವನಾಂಶಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿತ್ತು. ಕೌಟುಂಬಿಕ ನ್ಯಾಯಾಲಯವು ಪತಿ& ಪತ್ನಿ ಜತೆಗಿನ ಸಂಭಾಷಣೆಯ ರೆಕಾರ್ಡ್​ ಅನ್ನು ಸ್ಯಾವಾಗಿ ಹಾಜರುಪಡಿಸಲು ಅನುಮತಿ ನೀಡಿತ್ತು. ಪತ್ನಿ ತನ್ನ ಪತಿಯಿಂದ ಜೀವನಾಂಶ ಭತ್ಯೆಗಾಗಿ 2019ರಲ್ಲಿ ಮಹಾಸಮುಂಡ್​ನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಪುರಾವೆಯನ್ನು ನ್ಯಾಯಾಲಯದಲ್ಲಿ ಸಲ್ಲಿಸಿದ್ದರು. ಪತ್ನಿ ಮೇಲಿನ ಅನುಮಾನದಿಂದ ಪತಿ ಜೀವನಾಂಶ ನೀಡಲು ನಿರಾಕರಿಸಿದ್ದರು. ಅರ್ಜಿದಾರರ ಸಂಭಾಷಣೆಯನ್ನು ತಮ್ಮ ಮೊಬೈಲ್​ೋನ್​ನಲ್ಲಿ ರೆಕಾರ್ಡ್​ ಮಾಡಲಾಗಿದೆ. ರೇಕಾರ್ಡ್​ ಆಧಾರದ ಮೇಲೆ ಪತ್ನಿಯನ್ನು ನ್ಯಾಯಾಲಯದ ಮುಂದೆ ಕ್ರಾಸ್​ ಎಕ್ಸಾಮಿನ್​ ಮಾಡಬೇಕು ಎಂದು ಪತಿ ಅರ್ಜಿ ಸಲ್ಲಿಸಿದ್ದರು. ಪತಿ ಸಲ್ಲಿಸಿದ್ದ ಅರ್ಜಿ ಸ್ವೀಕರಿಸಿದ ಕೌಟುಂಬಿಕ ನ್ಯಾಯಾಲಯ ಅನುಮತಿ ನೀಡಿತ್ತು.

    ಹೈಕೋರ್ಟ್​ ಮೊರೆ ಹೋದ ಮಹಿಳೆ

    ಕೌಟುಂಬಿಕ ನ್ಯಾಯಾಲಯದ ಆದೇಶದ ನಂತರ ಮಹಿಳೆಯು 2021ರ ಅಕ್ಟೋಬರ್​ 21ರಂದು ಹೈಕೋರ್ಟ್​ ಮೊರೆ ಹೋಗಿದ್ದರು. ದೂರವಾಣಿ ರೆಕಾರ್ಡಿಂಗ್​ ಅನ್ನು ಸ್ಯಾವಾಗಿ ಪ್ರಸ್ತುತಪಡಿಸುವ ಆದೇಶವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದರು. ಇದು ತನ್ನ ಖಾಸಗಿತನದ ಹಕ್ಕನ್ನು ಉಲ್ಲಂಸಿದಂತಾಗುತ್ತದೆ ಎಂದು ಮಹಿಳೆ ಪ್ರತಿಪಾದಿಸಿದ್ದರು. ಕೌಟುಂಬಿಕ ನ್ಯಾಯಾಲಯವು ಸಂಭಾಷಣೆಯ ರೆಕಾರ್ಡಿಂಗ್​ ಮಂಡನೆಗೆ ಅವಕಾಶ ನೀಡುವ ಮೂಲಕ ಕಾನೂನು ದೋಷ ಎಸಗಿದೆ. ಸಂಭಾಷಣೆಯನ್ನು ಅರ್ಜಿದಾರರಿಗೆ ತಿಳಿಯದೆ ಪ್ರತಿವಾದಿಯು ರೆಕಾರ್ಡ್​ ಮಾಡಿದ್ದಾರೆ. ಆದ್ದರಿಂದ ಅದನ್ನು ಅವರ ವಿರುದ್ಧ ಬಳಸಲಾಗುವುದಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts