ರವಿಕೆ ಖರೀದಿಗೆ ಹೋಗಿದ್ದ ವಿಧಾನ ಪರಿಷತ್ ಸದಸ್ಯೆ ಪರ್ಸ್ ಕಳವು!

bharathi shetty
bharathi shetty
Published on

ಬೆಂಗಳೂರು: ನಗರದ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ರವಿಕೆ ಖರೀದಿಸಲು ಹೋಗಿದ್ದ ವಿಧಾನ ಪರಿಷತ್ ಸದಸ್ಯೆಯ ಪರ್ಸ್ ಕಳವಾಗಿದ್ದು, ಹುಡುಕಿಕೊಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ.

ಬಿಜೆಪಿ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಪರ್ಸ್ ಕಳೆದುಕೊಂಡವರು.

''ಏಪ್ರಿಲ್ 1ರ ಮಧ್ಯಾಹ್ನ 1.30ರಲ್ಲಿ ರವಿಕೆ ಖರೀದಿಸಲು ಕಮರ್ಷಿಯಲ್ ಸ್ಟ್ರೀಟ್ ಮೇನ್ ಗಾರ್ಡ್ ಕ್ರಾಸ್ ರಸ್ತೆಯಲ್ಲಿರುವ ಸಫಿನಾ ಪ್ಲಾಜಾದಲ್ಲಿರುವ ಕಾಂಚನಾ ಅಂಗಡಿಗೆ ಹೋಗಿದ್ದೆ. ರವಿಕೆ ನೋಡಲು ಕೈಯಲ್ಲಿದ್ದ ಪರ್ಸ್‌ನ್ನು ಟೇಬಲ್ ಮೇಲಿಟ್ಟು ಆಯ್ಕೆ ಮಾಡುತ್ತಿದ್ದೆ. ಕೊನೆಗೆ ಯಾವುದು ಇಷ್ಟ ಆಗದ ಕಾರಣ ಅಂಗಡಿಯಿಂದ ಹಿಂತಿರುಗಿದೆ. ಮಧ್ಯಾಹ್ನ 3.45ರಲ್ಲಿ ಪರ್ಸ್ ಇಲ್ಲದೆ ಇರುವುದು ಅರಿವಿಗೆ ಬಂದು ತಕ್ಷಣ ಅಂಗಡಿಗೆ ಹೋಗಿ ನೋಡಿದಾಗ ಟೇಬಲ್ ಮೇಲೆ ಪರ್ಸ್ ಇರಲಿಲ್ಲ. ಈ ಬಗ್ಗೆ ಅಂಗಡಿ ಸಿಬ್ಬಂದಿಯನ್ನು ಕೇಳಿದಾಗ ಸಾಕಷ್ಟು ಗ್ರಾಹಕರು ಅಂಗಡಿಗೆ ಬರುತ್ತಾರೆ. ಯಾರು ತೆಗೆದುಕೊಂಡು ಹೋಗಿರುತ್ತಾರೆ. ಗೊತ್ತಾಗುವುದಿಲ್ಲ ಎಂದು ಉತ್ತರಿಸಿದರು. ಕಳವಾಗಿರುವ ಪರ್ಸ್‌ನಲ್ಲಿ 25 ಸಾವಿರ ರೂ., ಎಸ್‌ಬಿಐ, ಕೆನರಾ ಬ್ಯಾಂಕ್ ಎಟಿಎಂ, ಪಾನ್ ಕಾರ್ಡ್, ಎಂಎಲ್‌ಸಿ ಐಡಿ ಕಾರ್ಡ್ ಇದ್ದವು. ಹಾಗಾಗಿ ಕಳವಾಗಿರುವ ಪರ್ಸ್‌ನ್ನು ಪತ್ತೆಹಚ್ಚಿ ಕೊಡಬೇಕೆಂದು'' ಭಾರತಿ ಶೆಟ್ಟಿ ತಮ್ಮ ಆಪ್ತ ಸಹಾಯಕಿ ಶಶಿಕಲಾ ಮೂಲಕ ದೂರು ನೀಡಿದ್ದಾರೆ.

ಈ ಕುರಿತು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net