

ಅಂಕೋಲ: ಅಪಘಾತವಾದರೆ ಜನರು ಸಾಮಾನ್ಯವಾಗಿ ಬೇಸರ ಪಡುತ್ತಾರೆ. ಆದರೆ ಇಲ್ಲೊಂದು ಕಡೆ ಲಾರಿಯೇ ಮಗುಚಿ ಬಿದ್ದರೂ ಒಂದಷ್ಟು ಮಂದಿ ಖುಷಿಯಾಗಿದ್ದಲ್ಲದೆ ಪಾರ್ಟಿಯನ್ನೂ ಮಾಡಿದ್ದಾರೆ. ಏಕೆಂದರೆ ಪಲ್ಟಿಯಾಗಿದ್ದು ಮದ್ಯ ಸಾಗಿಸುತ್ತಿದ್ದ ಲಾರಿ.
ಹೌದು.. ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯೊಂದು ಅಪಘಾತಕ್ಕೀಡಾಗಿ ಪಲ್ಟಿಯಾಗಿದೆ. ಉತ್ತರಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಅಡ್ಲೂರು ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಈ ಲಾರಿಯಲ್ಲಿ ಗೋವಾದಿಂದ ಮದ್ಯವನ್ನು ತುಂಬಿಕೊಂಡು ಹುಬ್ಬಳ್ಳಿಗೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು.
ಆದರೆ ವಿವಿಧ ಬ್ರ್ಯಾಂಡ್ನ ಮದ್ಯದ ಬಾಕ್ಸ್ಗಳನ್ನು ತುಂಬಿಕೊಂಡು ಹೊರಟಿದ್ದ ಈ ಲಾರಿ ಅಪಘಾತಕ್ಕೀಡಾಗಿ ಪಲ್ಟಿಯಾಗಿದ್ದರಿಂದ, ಅದರಲ್ಲಿ ತುಂಬಿದ್ದ ಮದ್ಯದ ಬಾಕ್ಸ್ಗಳು ರಸ್ತೆಗೆ ಬಿದ್ದು ಚೆಲ್ಲಾಪಿಲ್ಲಿಯಾಗಿವೆ. ಈ ಸಂದರ್ಭದಲ್ಲಿ ಇಲ್ಲಿ ಜಮಾಯಿಸಿದ ಕೆಲವರು ಮದ್ಯದ ಬಾಟಲಿಗಳ ಬಾಕ್ಸ್ಗಳನ್ನೇ ಹೊತ್ತೊಯ್ದಿದ್ದಾರೆ. ಅಂಕೋಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.