ಬ್ರಶ್ ಹಿಡಿದು ಗೋಡೆ ಬರಹ ಬರೆದ ಎಂಎಲ್‌ಎ! ಏಕೆ ಗೊತ್ತಾ?

MLA Sunil
Published on

ಬೆಂಗಳೂರು: ನೆರೆ ರಾಜ್ಯದಲ್ಲಿ‌ ರಾಜ್ಯದ ಶಾಸಕರೊಬ್ಬರು ರಸ್ತೆ ಪಕ್ಕದ ಗೋಡೆ ಮೇಲೆ ಬ್ರಶ್ ಮೂಲಕ ಬರಹ ಬರೆದು- ಬಣ್ಣ ಹಚ್ಚಿ ಗಮನ‌ ಸೆಳೆದಿದ್ದಾರೆ.

ಕಾರ್ಕಳ ಬಿಜೆಪಿ ಶಾಸಕ ಸುನೀಲ್ ಕುಮಾರ್ ನೆರೆಯ ಕೇರಳದ ವಿಧಾನಸಭಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ವೇಳೆ ಸ್ಥಳೀಯ ಕಾರ್ಯಕರ್ತರಲ್ಲಿ ಉತ್ಸಾಹ ತುಂಬ ಉದ್ದೇಶದಿಂದ ಪ್ರಚಾರದ ಗೋಡೆ ಬರಹ ಬರೆಯಲು ಸ್ವತಃ ರಸ್ತೆಗಿಳಿದರು.

ಕ‌ನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರು ಈ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಸುನೀಲ್ ಕುಮಾರ್ ಅವರು ಕನ್ನಡದಲ್ಲೇ ಗೋಡೆ ಬರಹ ಬರೆದು ಬಣ್ಣ ತುಂಬಿರುವುದು ವಿಶೇಷ ಸಂಗತಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net