More

    ಟ್ರಕ್​ ಚಾಲನೆ ವೇಳೆ ಹೆಲ್ಮೆಟ್​ ಧರಿಸಿಲ್ಲ ಎಂದು ಹೀಗೆಲ್ಲಾ ಮಾಡೋದಾ? ಬೇಸ್ತು ಬಿದ್ದ ಚಾಲಕ!

    ಭುವನೇಶ್ವರ (ಒಡಿಶಾ): ಕೆಲವೊಮ್ಮೆ ಕೆಲವು ಕಾನೂನುಗಳು ಎಷ್ಟು ವಿಚಿತ್ರ ಆಗಿರುತ್ತವೆ ಎಂದರೆ ಅದನ್ನು ನಂಬುವುದು ಕೂಡ ಅಸಾಧ್ಯವಾಗುತ್ತದೆ. ಇನ್ನು ಕೆಲವೊಮ್ಮೆ ಯಾವುದೋ ಕಾನೂನನ್ನು ಇನ್ನಾವುದಕ್ಕೋ ಅಳವಡಿಕೆ ಮಾಡಿ ಪೊಲೀಸ್​ ಇಲಾಖೆ ಹುಚ್ಚುತನ ಪ್ರದರ್ಶಿಸುವುದೂ ಇದೆ.

    ಅಂಥದ್ದೇ ಒಂದು ಘಟನೆ ಒಡಿಶಾದಲ್ಲಿ ನಡೆದಿದೆ. ಟ್ರಕ್​ ಚಾಲಕ ವಾಹನ ಚಲಾಯಿಸುವ ಸಂದರ್ಭದಲ್ಲಿ ಹೆಲ್ಮೆಟ್​ ಧರಿಸಿಲ್ಲ ಎಂಬ ಕಾರಣಕ್ಕೆ ಅವರ ಪರವಾನಗಿಯನ್ನು ನವೀಕರಣ ಮಾಡದ ಘಟನೆ ಇದಾಗಿದೆ. ಗಂಜಂ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಗೆ ತೆರಳಿದಾಗಲೇ ಚಾಲಕನಿಗೆ ಈ ವಿಷಯ ತಿಳಿದುಬಂದಿದೆ.

    ಟ್ರಕ್ ಚಾಲಕನಾಗಿರುವ ಪ್ರಮೋದ್ ಕುಮಾರ್ ವಾಹನದ ಪರ್ಮಿಟ್ ಮರುನವೀಕರಣಕ್ಕೆ ಗಂಜಂ ಆರ್​ಟಿಒ ಕಚೇರಿಗೆ ಹೋಗಿದ್ದರು. ಆದರೆ ನಿಮ್ಮ ಪರ್ಮಿಟ್​ ನವೀಕರಣ ಮಾಡಲ್ಲ ಎಂದರು ಅಧಿಕಾರಿಗಳು. ಆ ಬಗ್ಗೆ ವಿಚಾರಣೆ ಮಾಡಿದಾಗ ಒಂದು ಸಾವಿರ ರೂಪಾಯಿ ದಂಡ ಕಟ್ಟಿಲ್ಲದೇ ಇರುವುದು ತಿಳಿಯಿತು. ನಂತರ ಅವರು ಇದಕ್ಕೆ ಕಾರಣ ಕೇಳಿದಾಗ ಹೆಲ್ಮೆಟ್ ಹಾಕದೆ ವಾಹನ ಚಲಾಯಿಸಿರುವ ಪ್ರಕರಣ ದಾಖಲಾಗಿರುವುದು ತಿಳಿದಿದೆ!

    ನಂತರ ಮಾತುಕತೆ ನಡೆಸಿದರೂ ಪ್ರಯೋಜವ ಆಗಲಿಲ್ಲ. ಒಂದು ಸಾವಿರ ರೂ.ದಂಡ ಕೊಟ್ಟು ಪರ್ಮಿಟ್​ ನವೀಕರಣ ಮಾಡಿಸಿಕೊಂಡಿದ್ದಾರೆ. ನಂತರ ಮಾಧ್ಯಮಗಳ ಎದುರು ಆಕ್ರೋಶ ಹೊರಹಾಕಿರುವ ಪ್ರಮೋದ್​, ಹೆಲ್ಮೆಟ್ ಹಾಕಿಕೊಂಡೆ ಟ್ರಕ್ ಚಲಾಯಿಸುವ ಕಾನೂನು ಜಾರಿಗೆ ತಂದರೆ ಅದೇ ರೀತಿ ಮಾಡುತ್ತೇನೆ. ಅದರೆ, ದುರುದ್ದೇಶಪೂರ್ವಕವಾಗಿ ಲಂಚ ಕೀಳಲು ಈ ರೀತಿಯ ಇಲ್ಲಸಲ್ಲದ ಆರೋಪ ಮಾಡುವುದು ಯಾವ ನ್ಯಾಯ ಸರ್ಕಾರ ಇಂತಹ ಲಂಚಬಾಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

    ಪ್ರೇಯಸಿಯ ಸಮ್ಮತಿ ಮೇರೆಗೆ ಸೆಕ್ಸ್​ ಮಾಡಿ, ರೇಪ್​ ಕೇಸ್​ನಲ್ಲಿ ತಗಲಾಕಿಕೊಂಡ ಪತ್ರಕರ್ತ- ಹೈಕೋರ್ಟ್​ ಹೇಳಿದ್ದೇನು?

    ಆಕಾಶದಲ್ಲಿಯೇ ಹುಟ್ಟಿತು ಹೆಣ್ಣುಮಗು: ಬೆಂಗಳೂರಿನ ಯುವತಿಗೆ ಖರ್ಚಿಲ್ಲದೇ ನೆರವೇರಿತು ಹೆರಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts