ಎತ್ತಿನ ಬಂಡಿಗೆ ಬೈಕ್ ಡಿಕ್ಕಿ: ನವದಂಪತಿ ಸ್ಥಳದಲ್ಲೇ ಸಾವು

accident
Published on

ಹೊಸಪೇಟೆ(ಬಳ್ಳಾರಿ): ಇತ್ತೀಚಿಗಷ್ಟೇ ಮದುವೆಯಾಗಿದ್ದ ನವದಂಪತಿ ಊರಿಗೆ ಹೋಗುವ ಮಾರ್ಗಮಧ್ಯೆ ದುರಂತ ಅಂತ್ಯಕಂಡಿದ್ದಾರೆ.

ಶಿವಕುಮಾರ್ ಮತ್ತು ನಿವೇದಿತಾ ಮೃತ ದುರ್ದೈವಿಗಳು. ಇವರಿಬ್ಬರೂ ಬೈಕ್​ನಲ್ಲಿ ಸೋಮವಾರ ಬೆಳಗ್ಗೆ ಜಗಳೂರು ತಾಲೂಕಿನ ಹೊಸಕೆರೆಯಿಂದ ಸಂಡೂರಿಗೆ ಹೊರಟಿದ್ದರು. ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಬೆನಕನಹಳ್ಳಿ ಬಳಿ ಎತ್ತಿನ ಬಂಡಿಗೆ ಬೈಕ್​ ಡಿಕ್ಕಿಯಾದ ಪರಿಣಾಮ ನವದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿರಿ ಶರವೇಗದ ರೈಲಿನ ಎದುರು ಧರ್ಮೇಗೌಡ ನಿಂತಿದ್ಹೇಗೆ? ರೈಲು ಚಾಲಕ ಬಾಯ್ಬಿಟ್ಟ ಭಯಾನಕ ಸತ್ಯ

ನಿವೇದಿತಾ ಮೂಲತಃ ಜಗಳೂರು ತಾಲೂಕಿನ ಹೊಸಕೆರೆಹಳ್ಳಿಯವರು. ಶಿವಕುಮಾರ್ ಸಂಡೂರು ನಿವಾಸಿ. ಇವರಬ್ಬರೂ ಇತ್ತೀಚಿಗಷ್ಟೇ ಮದುವೆ ಆಗಿದ್ದರು. ನಿವೇದಿತಾಳನ್ನು ತವರು ಮನೆಯಿಂದ ತನ್ನ ಮನೆಗೆ ಶಿವಕುಮಾರ್​ ಕರೆದೊಯ್ಯುತ್ತಿದ್ದ. ಮನೆಗೆ ಹೋಗುವ ಮೊದಲೇ ಇವರಿಬ್ಬರೂ ದಾರಿಯಲ್ಲೇ ಹೆಣವಾಗಿದ್ದಾರೆ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net