ತಪಾಸಣೆ ವೇಳೆ ಬೆಚ್ಚೀಬಿಳಿಸುವ ಅಂಶಗಳು ಬೆಳಕಿಗೆ ಬಂದಿವೆ. ವಾರ್ಡ್ 59ರಲ್ಲಿ ಆ್ಯಪ್ನಲ್ಲಿ 24 ಆಟೋ ಟಿಪ್ಪರ್ಗಳು ಕಾರ್ಯನಿರ್ವಹಿಸುತ್ತಿವೆ ಎಂದು ದಾಖಲಾಗಿದ್ದರೂ ಸ್ಥಳದಲ್ಲಿ 21 ವಾಹನಗಳು ಮಾತ್ರ ಕಂಡುಬಂದವು. ವಾರ್ಡ್ 49ರಲ್ಲಿ 25 ವಾಹನಗಳ ಪೈಕಿ ಕೇವಲ 10 ವಾಹನಗಳು, ವಾರ್ಡ್ 27ರಲ್ಲಿ 35 ವಾಹನಗಳ ಪೈಕಿ 17 ವಾಹನಗಳು ಹಾಗೂ ವಾರ್ಡ್ 24ರಲ್ಲಿ 31 ವಾಹನಗಳ ಪೈಕಿ 18 ವಾಹನಗಳು ಮಾತ್ರ ಹಾಜರಿದ್ದವು. ಒಟ್ಟಾರೆ ದಾಖಲೆಗಳಲ್ಲಿ 115 ವಾಹನಗಳು ಕಾರ್ಯನಿರ್ವಹಿಸುತ್ತಿವೆ ಎಂದು ತೋರಿಸಿದ್ದರೆ, ಸ್ಥಳದಲ್ಲಿ ಕೇವಲ 66 ವಾಹನಗಳು ಮಾತ್ರ ಪತ್ತೆಯಾಗಿವೆ.