ರಾಜಧಾನಿಗೆ ಕಸದ ಕಂಟಕ ಸಾಧ್ಯತೆ | waste problem

ಚಿಕ್ಕಲಸಂದ್ರದಲ್ಲಿ ಕಸದ ರಾಶಿ
ಚಿಕ್ಕಲಸಂದ್ರದಲ್ಲಿ ಕಸದ ರಾಶಿ
Published on

ಪ್ರಮುಖ ಮುಖ್ಯಾಂಶಗಳು

  • ಹೊರವಲಯದಲ್ಲಿ ಕಸ ವಿಲೇವಾರಿಗೆ ತೀವ್ರ ಪ್ರತಿರೋಧ
  • ಸಮಸ್ಯೆ ಇತ್ಯರ್ಥಕ್ಕೆ ಜಿಬಿಎ ಸತತ ಪ್ರಯತ್ನ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜಧಾನಿಯ ಹೊರ ವಲಯದಲ್ಲಿ ಕಸ ವಿಲೇವರಿಗೆ ಸಮಸ್ಯೆ ಎದುರಾಗುತ್ತಿರುವ ಹಿನ್ನೆಲೆ ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಗ್ರಾಮಾಭಿವೃದಿ ಅಭಿವೃದ್ಧಿ ನಿಧಿ ಬಿಡುಗಡೆ ಮಾಡದ ಹಿನ್ನೆಲೆ ಬೆಳ್ಳಹಳ್ಳಿ -ಮಿಟ್ಟಗಾನಹಳ್ಳಿ ಕಸ ಡಂಪಿಂಗ್​ ಯಾರ್ಡ್​(ಲ್ಯಾಂಡ್​ಫಿಲ್​-ಭೂ ಭರ್ತಿ) ಗೆ ಕಸ ವಿಲೇವಾರಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ, ಮಂಗಳವಾರದಿಂದ ಕಸದ ಲಾರಿಗಳನ್ನು ತಡೆಹಿಡಿದಿದ್ದಾರೆ. ಸ್ಥಳಿಯ ಜನಪ್ರತಿನಿಧಿಗಳ ನೇತೃತ್ವದಲ್ಲಿ ಕಸ ವಿಲೇವಾರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಬೆಳ್ಳಹಳ್ಳಿ&ಮಿಟ್ಟಗಾನಹಳ್ಳಿ ಭೂ ಭರ್ತಿಗೆ ವಿರೋಧ ವ್ಯಕ್ತವಾದ ಹಿನ್ನೆಲೆ ಜಿಬಿಎ ದೊಡ್ಡಬಳ್ಳಾಪುರದ ಚಿಗರೇನಹಳ್ಳಿ ಬಳಿ ಇರುವ ಎಂಎಸ್​ಜಿಪಿ ಕಸದ ಟಕಕ್ಕೆ ಲಾರಿಗಳನ್ನು ಕಳುಹಿಸಿದೆ. ಆದರೆ, ವಿಷಯ ತಿಳಿದ ಅಲ್ಲಿಯ ಗ್ರಾಮಸ್ಥರು ಸಹಿತ ಶಾಸಕ ಧೀರಜ್​ ಮುನಿರಾಜು ನೇತೃತ್ವದಲ್ಲಿ ಹೋರಾಟ ಮಾಡಿದ್ದು, ನಿತ್ಯ ಬರುವ 72 ಲಾರಿ ಹೊರತುಪಡಿಸಿ, ಹೆಚ್ಚುವರಿಯಾಗಿ ಬಂದ ಲಾರಿಯನ್ನು ತಡೆ ಹಿಡಿದಿದ್ದಾರೆ.
ದೊಡ್ಡಬಳ್ಳಾಪುರದಲ್ಲಿರುವ ಟಕಕ್ಕೆ ಹೆಚ್ಚುವರಿಯಾಗಿ 400 ಲಾರಿಗಳನ್ನು ಕಳುಹಿಸಲಾಗಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ದೊಡ್ಡಬಳ್ಳಾಪುರವನ್ನು ಕಸದ ತೊಟ್ಟಿ ಮಾಡಬೇಡಿ: ದೊಡ್ಡಬಳ್ಳಾಪುರ ತಾಲೂಕನ್ನು ಜಿಬಿಎ ಯ ಕಸದ ತೊಟ್ಟಿ ಮಾಡಲು ಯಾವುದೇ ಕಾರಣಕ್ಕೂ ನಾವು ಬಿಡುವುದಿಲ್ಲ. ಈಗಾಗಲೇ ಅವೈಜ್ಞಾನಿಕ ಕಸ ವಿಲೇವಾರಿಯಿಂದ ಟಕದಲ್ಲಿ ಬೆಟ್ಟದೋಪಾದಿಯಲ್ಲಿ ಕಸ ಸಂಗ್ರಹವಾಗಿದೆ. ಈಗ ಇಲ್ಲಿ ಇರುವ ಕಸವನ್ನೇ ವಿಲೇವಾರಿ ಮಾಡಲು ಆಗುತ್ತಲ್ಲ. ಇನ್ನು ಬೆಂಗಳೂರಿನ ಎಲ್ಲ ಕಸ ತಂದರೆ ಹೇಗೆ ವಿಲೇವಾರಿ ಮಾಡುವುದು ಎಂದು ಸ್ಥಳಿಯರು ಆಕ್ರೋಶ ಹೊರಹಾಕಿದ್ದಾರೆ.
ದುರ್ವಾಸನೆಗೆ ಸ್ಥಳಿಯರ ಆಕ್ರೋಶ
ಮಹದೇವಪುರದ ಮಿಟ್ಟಗಾನಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕಗಳ ಬಳಿ ಸ್ಥಳಿಯ ಗ್ರಾಮಸ್ಥರು 
ಕಸದ ಲಾರಿಗಳನ್ನು ತಡೆದಿದ್ದಾರೆ. ಘಟಕದ ಸುತ್ತಮುತ್ತಲಿನ ಪ್ರದೇಶಗಳ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಅಪಘಾತಗಳಾಗಿ ಸಾವುನೋವುಗಳು ಸಂಭವಿಸುತ್ತಿವೆ. ಮೂಲಸೌಲಭ್ಯಗಳಿಗೆ ಜಿಬಿಎ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದೂ ಕಣ್ಣೂರು, ಮೀಟಗಾನಹಳ್ಳಿ ಜನರು ಕಸ ವಿಲೇವಾರಿ ಲಾರಿಗಳಿಗೆ ದಿಗ್ಬಂಧನ ಹಾಕಿದ್ದಾರೆ. ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿಯಿಂದ ದುರ್ವಾಸನೆ ಬೀರುತ್ತಿದ್ದು, ಸ್ಥಳಿಯರ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮ ಬೀರುತ್ತಿದೆ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದರು. 70ಕ್ಕೂ ಹೆಚ್ಚು ಕಸ ಸಾಗಣೆ ಲಾರಿಗಳು ಸ್ಥಳದಲ್ಲಿಯೇ ನಿಂತಿದ್ದು, ಬೆಂಗಳೂರು ನಗರದಾದ್ಯಂತ ಕಸ ವಿಲೇವಾರಿ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ. ಬೇಡಿಕೆ ಈಡೇರುವವರೆಗೂ ಕಸದ ವಾಹನಗಳನ್ನು ಒಳಗೆ ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಸ್ಥಳಿಯ ಮೂಲಸೌಕರ್ಯ ಅಭಿವೃದ್ಧಿಗೆ ಭರವಸೆ ನೀಡಿದ ಹಣವನ್ನು ಸುಮಾರು ಎರಡು ವರ್ಷಗಳಿಂದ ಬಿಡುಗಡೆ ಮಾಡಲಾಗಿಲ್ಲ ಎಂಬ ಸ್ಥಳಿಯರ ದೂರುಗಳಿಂದ ಪ್ರತಿಭಟನೆ ಆರಂಭವಾಗಿದೆ.
ಈ ಎಲ್ಲ ಟನೆಯಿಂದ ಕಸ ತುಂಬಿದ ಲಾರಿಗಳು ಭೂ ಭರ್ತಿ ಪ್ರದೇಶದ ಬಳಿ ನಿಂತಿದ್ದು, ಬೆಂಗಳೂರಿನ ನಿತ್ಯದ ಕಸ ವಿಲೇವಾರಿಗೆ ತೊಡಕುಂಟಾಗಿದೆ. ಇದರಿಂದ ಸಿಲಿಕಾನ್​ ಸಿಟಿಯಲ್ಲಿ ರಸ್ತೆ ಬದಿಯಲ್ಲಿ ಕಸದ ರಾಶಿ ಸುರಿದು ಗಬ್ಬೆಬ್ಬಿಸುವ ಸಾಧ್ಯತೆ ಇದೆ.
ಪಟ್ಟು ಬಿಡದ ಗ್ರಾಮಸ್ಥರು
ಬೆಳ್ಳಹಳ್ಳಿ&ಮಿಟ್ಟಗಾನಹಳ್ಳಿ ಗ್ರಾಮಸ್ಥರು ಕಸದ ಲಾರಿಗಳನ್ನು ಭೂ ಭರ್ತಿ ಪ್ರದೇಶಕ್ಕೆ ಬಿಡದೆ ಹೋರಾಟವನ್ನು ಮುಂದುವರೆಸಿದ್ದಾರೆ. ರಸ್ತೆಗೆ ಟ್ರಾಕ್ಟರ್​ಗಳನ್ನು ಅಡ್ಡನಿಲ್ಲಿಸಿ,ರಸ್ತೆ ಬಂದ್​ ಮಾಡಿದ್ದಾರೆ. ಗ್ರಾಮಾಭಿವೃದ್ಧಿ ನಿಧಿ ಬಿಡುಗಡೆಯಾಗಿಲ್ಲ. ಕಸ ವಿಲೇವಾರಿಗೆ ಸಂಬಂಧಿಸಿದಂತೆ ಕೆಲವು ನಿಯಮಗಳು ಮತ್ತು ಒಡಂಬಡಿಕೆಗಳು ಇದ್ದರೂ ಅವುಗಳನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲ. ಇದರಿಂದ ದುರ್ವಾಸನೆ, ರೋಗಗಳು ಹರಡುತ್ತಿವೆ. ಗ್ರಾಮಾಭಿವೃದ್ಧಿ ನಿಧಿ ಜೊತೆಗೆ ಸಮರ್ಪಕ ತ್ಯಾಜ್ಯ ವಿಲೇವಾರಿ ಮಾಡುವವರೆಗೂ ಹೋರಾಟ ನೀಲ್ಲುವುದಿಲ್ಲ ಎಂದು ಗ್ರಾಮಸ್ಥರು ಬಿಗಿಪಟ್ಟು ಹಿಡಿದಿದ್ದಾರೆ.
ಕಸ ವಿಲೇವಾರಿ ಶ್ರೀ ಇತ್ಯರ್ಥ
ಕಸದ ವಿಲೇವಾರಿ ವಿರುದ್ಧ ಸ್ಥಳಿಯರು ವ್ಯಕ್ತಪಡಿಸಿರುವ ಆಕ್ರೋಶದ ಹಿನ್ನೆಲೆ ಪರಿಸ್ಥಿತಿಯನ್ನು ಶ್ರೀದಲ್ಲೆ ಸರಿಪಡಿಸಲಾಗುವುದು. ಸ್ಥಳಿಯ ನಿವಾಸಿಗಳ ಜತೆ ಮಾತುಕತೆ ನಡೆಸಿ ಮುಂದಿನ 2&3 ದಿನಗಳಲ್ಲಿ ಸಮಸ್ಯೆಯನ್ನು ಇತ್ಯರ್ಥಗೊಳಿಸಲಾಗುವುದು. ಈಗಾಗಲೇ ನತ್ಯಾಜ್ಯ ವಿಭಾಗದ ಅಧಿಕಾರಿಗಳು ಹಾಗೂ ಎಂಜಿನಿಯರ್​ಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳಿಯರ ಮನವೊಲಿಸಲುಪ್ರಯತ್ನಿಸಿದ್ದಾರೆ. ಸ್ಥಳಿಯಪ್ರದೇಶ ಅಭಿವೃದ್ಧಿಗೆ ಸಂಬಂಧಿಸಿ ಹಣ ಬಿಡುಗಡೆ ಮಾಡುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ. ಈ ಬೇಡಿಕೆಯನ್ನು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹಣ ಬಿಡುಗಡೆಗೆ ಸಂಬಂಧಿಸಿದಂತೆ ಎಲ್ಲ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್​ ಸ್ಪಷ್ಟನೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net