ಆರಂಭದಲ್ಲಿ ಸುಮಾರು 28,400 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು. ಕೇಂದ್ರ ಸಚಿವಾಲಯದ ಸೂಚನೆಯಂತೆ ಫ್ರೆಂಚ್ ಮೂಲದ "ಸಿಸ್ಟ್ರಾ' ಸಂಸ್ಥೆ ಮರುಪರಿಶೀಲನೆ ನಡೆಸಿ ಸುರಂಗ ನಿಲ್ದಾಣಗಳ ಉದ್ದ ಕಡಿತ ಸೇರಿ ಹಲವು ಬದಲಾವಣೆಗಳನ್ನು ಶಿಫಾರಸು ಮಾಡಿತ್ತು. ಇದರ ಪರಿಣಾಮ ಯೋಜನಾ ವೆಚ್ಚ ಸುಮಾರು 2,920 ಕೋಟಿ ರೂ. ಇಳಿಕೆಯಾಗಿ 25,485 ಕೋಟಿ ರೂ.ಗೆ ಪರಿಷತಗೊಂಡಿದೆ.