ಕೆಎಸ್​ಆರ್​ ತಲುಪಿದ ವಂದೇ ಭಾರತ್​ 2 ಸ್ಲೀಪರ್​ ರೈಲು

ವಂದೇ ಭಾರತ್
ವಂದೇ ಭಾರತ್
Published on

ಪ್ರಮುಖ ಮುಖ್ಯಾಂಶಗಳು

  • ವಾಣಿಜ್ಯ ಸಂಚಾರಕ್ಕೂ ಮುನ್ನ ಕಮಿಷನಿಂಗ್​, ಸುರಕ್ಷತಾ ಪರೀಕ್ಷೆ
  • ಬೆಂಗಳೂರು&ಮುಂಬೈ ಮಾರ್ಗದಲ್ಲಿ ಸೇವೆ ಸಾಕಾರ?
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬಿಇಎಂಎಲ್​ ಸಂಸ್ಥೆ ಈ ರೈಲುಗಳನ್ನು ತಯಾರಿಸಿರುವ ವಂದೇ ಭಾರತ್​ ಸ್ಲೀಪರ್​ ಸೌಕರ್ಯವುಳ್ಳ ಎರಡು ರೈಲುಗಳು ಬೆಂಗಳೂರಿಗೆ ಆಗಮಿಸಿದ್ದು, ಶ್ರೀ ಸೇವೆ ಆರಂಭವಾಗುವ ಸಾಧ್ಯತೆ ಇದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಕೋಚಿಂಗ್​ ಲೈನ್​ನಲ್ಲಿರುವ ರೈಲುಗಳನ್ನು ಶೀಘ್ರದಲ್ಲೇ ಕಮಿಷನಿಂಗ್​ ಹಾಗೂ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತದೆ. ರೈಲುಗಳ ಯಾಂತ್ರಿಕ ಮತ್ತು ವಿದ್ಯುತ್​ ವ್ಯವಸ್ಥೆ, ಬ್ರೇಕಿಂಗ್​ ಕಾರ್ಯಕ್ಷಮತೆ, ಸಂವಹನ ವ್ಯವಸ್ಥೆ, ಸುರಕ್ಷತಾ ಉಪಕರಣಗಳು, ಆನ್​ಬೋರ್ಡ್​ ಸೌಲಭ್ಯಗಳು ಹಾಗೂ ಕಾರ್ಯಾಚರಣೆಯ ವಿಶ್ವಾಸಾರ್ಹತೆಯನ್ನು ಅಧಿಕಾರಿಗಳು ಸಮಗ್ರವಾಗಿ ಪರೀಕ್ಷಿಸಲಿದ್ದಾರೆ. ಆ ಬಳಿಕ ಜನಸೇವೆಗೆ ಲಭ್ಯವಾಗಲಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೂಲಕ ಬೆಂಗಳೂರು& ಮುಂಬೈ ನಡುವೆ ವಂದೇ ಭಾರತ್​ ಸ್ಲೀಪರ್​ ರೈಲು ಆರಂಭವಾಗುವ ಸಾಧ್ಯತೆ ಮತ್ತೆ ಚರ್ಚೆಗೆ ಬಂದಿದೆ. ಈ ಹಿಂದೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ಅವರು ಬೆಂಗಳೂರು&ಮುಂಬೈ ಸ್ಲೀಪರ್​ ಸೇವೆ ಶೀಘ್ರ ಆರಂಭವಾಗಲಿದೆ ಎಂದು ಹೇಳಿದ್ದರು. ಅದು ಸಾಕಾರವಾದರೆ, ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಪ್ರಯಾಣಿಕರ ಬಹುಕಾಲದ ಬೇಡಿಕೆಯೂ ಈಡೇರಿದಂತಾಗುತ್ತದೆ.
ಅತ್ಯಾಧುನಿಕ ವ್ಯವಸ್ಥೆ
ವಂದೇ ಭಾರತ್​ ಎಕ್ಸ್​ಪ್ರೆಸ್​ ಸೇವೆ 2019ರಲ್ಲಿ ಆರಂಭವಾಗಿತ್ತು. ದೇಶದ ಮೊದಲ ವಾಣಿಜ್ಯ ವಂದೇ ಭಾರತ್​ ಸ್ಲೀಪರ್​ ರೈಲು 2026ರ ಜ.22ರಂದು ಕಾಮಾಕ್ಯ& ಹೌರಾ ಮಾರ್ಗದಲ್ಲಿ ಸೇವೆ ಶುರು ಮಾಡಿತ್ತು. 16 ಬೋಗಿಗಳ ಈ ರೈಲು 823 ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಹೊಂದಿದ್ದು, ಅತ್ಯಾಧುನಿಕ ಸೌಲಭ್ಯಗಳಾದ ಸ್ವಯಂಚಾಲಿತ ಬಾಗಿಲು, ಸಿಸಿ ಕ್ಯಾಮರಾ, ಬಯೋ-ವ್ಯಾಕ್ಯೂಮ್​ ಶೌಚಗೃಹ, ಸೆನ್ಸರ್​ ಆಧಾರಿತ ನೀರಿನ ಕೊಳವೆ, ಚಾರ್ಜಿಂಗ್​ ಪಾಯಿಂಟ್​, ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಸಸ್ಯಾಹಾರಿ ಹಾಗೂ ಮಾಂಸಾಹಾರಿ ಆಹಾರ ವ್ಯವಸ್ಥೆಗಳನ್ನು ಒಳಗೊಂಡಿದೆ. "ಕವಚ್​' ಸುರಕ್ಷತಾ ವ್ಯವಸ್ಥೆಯೂ ರೈಲಿನ ಪ್ರಮುಖ ವೈಶಿಷ್ಟ$್ಯವಾಗಿದೆ.
ಅಧಿಕಾರಿಗಳ ಸ್ಪಷ್ಟನೆ
ಬೆಂಗಳೂರಿಗೆ ಬಂದಿರುವ ಎರಡು ರೈಲು ಸೆಟ್​ಗಳಲ್ಲಿ ಯಾವ ರೈಲು ಬೆಂಗಳೂರು&ಮುಂಬೈ ಮಾರ್ಗದಲ್ಲಿ ಅಥವಾ ಬೇರೆ ಕಾರಿಡಾರ್​ನಲ್ಲಿ ಸಂಚರಿಸಲಿದೆ ಎಂಬುದರ ಬಗ್ಗೆ ಇನ್ನೂ ತೀಮಾರ್ನ ಕೈಗೊಳ್ಳಲಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net