ಸಿರಿಕಲಾ ಮಹಿಳಾ ಯಕ್ಷೋತ್ಸವ 17,18 ರಂದು | YAKSHAGANA

ಯಕ್ಷಗಾನ
ಯಕ್ಷಗಾನ
Published on
ಬೆಂಗಳೂರು: ಸಿರಿಕಲಾಮೇಳದ ವತಿಯಿಂದ ಜೆ.ಸಿ.ರಸ್ತೆಯ ನಯನ ಸಭಾಂಗಣದಲ್ಲಿ ಜ.17 ಮತ್ತು 18 ರಂದು ಸಿರಿಕಲಾ ಮಹಿಳಾ ಯಕ್ಷೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಶನಿವಾರ ಸಂಜೆ 6.30ಕ್ಕೆ ಸಿರಿಕಲಾಮೇಳ ಮತ್ತು ಅತಿಥಿ ಕಲಾವಿದರಿಂದ ವೀರ ಅಭಿಮನ್ಯು ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ. ಕರ್ನಾಟಕ ಹೋಟೆಲ್​ ಮಾಲೀಕರ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ ಹೆಬ್ಬಾರ್​, ಕಲಾಪೋಷಕರಾದ ಅನಗಳ್ಳಿ ಕರುಣಾಕರ ಹೆಗ್ಡೆ, ಡಾ.ದೀಪಕ ಶೆಟ್ಟಿ, ಎಂ.ಆರ್​.ಭಟ್​, ಪಿ.ಸಿ.ರಾವ್​, ಪಟ್ಲ ಫೌಂಡೇಶನ್​ ಬೆಂಗಳೂರು ಘಟಕದ ಅಧ್ಯಕ್ಷ ಅಮರನಾಥ ಶೆಟ್ಟಿ, ಅಂಪಾರು ದಿನೇಶ ವೈದ್ಯ, ಆರ್​.ಶ್ರೀನಿವಾಸಚಾರ್​, ರಾಜೇಶ ಶೆಟ್ಟಿ ಕುತ್ಯಾರು, ಶ್ಯಾಮಸುಂದರ ಹೆಗಡೆ, ರಾಘವೇಂದ್ರ ಹತ್ವಾರ್​ ಮತ್ತಿತರ ಗಣ್ಯರು ಉಪಸ್ಥಿತರಿರುವರು.
ಭಾನುವಾರ ಸಿರಿಕಲಾಮೇಳದ 15ನೇ ವಾರ್ಷಿಕೋತ್ಸವ ನಂದಿನಿ ಬಡಾವಣೆಯ ಉತ್ತರ ಕನ್ನಡ ಸಂಘದ ಸಭಾಂಗಣದಲ್ಲಿ ನಡೆಯಲಿದ್ದು, ದ್ರೌಪದಿ ಪ್ರತಾಪ ಯಕ್ಷಗಾನ ಆಯೋಜಿಸಲಾಗಿದೆ. ಸಾಕ್ಷಿ ಟ್ರಸ್ಟಿನ ಡಾ.ರ.ವಿ.ಜಹಾಗೀರದಾರ ಅವರಿಗೆ ಸಿರಿಕಲಾಪೋಷಕ ಪುರಸ್ಕಾರ ಹಾಗೂ ಖ್ಯಾತ ಮದ್ದಳೆ ವಾದಕ ಗಜಾನನ ಭಂಡಾರಿ ಬೋಳ್ಗೆರೆ ಅವರಿಗೆ 25 ಸಾವಿರ ರೂಪಾಯಿ ಗಳ ಹಮ್ಮಿಣಿಯೊಂದಿಗೆ ಸಿರಿಕಲಾ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಕಲಾಪೋಷಕರಾದ ಎಚ್​.ಪಿ.ವಾಸುದೇವ ರಾವ್​, ಅರವಿಂದ ಎನ್​.ನಾಯಕ, ಬನವಾಸಿ ಕೃಷ್ಣಮೂರ್ತಿ, ಸುಧಾಕರ ಪೈ, ಜಿ.ಬಿ.ಕೌರಿ, ಡಿ.ಬಿ.ಪ್ರತಾಪ ಶೆಟ್ಟಿ, ಕೃಷ್ಣಮೂರ್ತಿ ಆರ್​.ನಾಯಕ, ನಿವೃತ್ತ ಮೇಜರ್​ ಗಣಪತಿ ಹೆಗಡೆ ಪಾಲ್ಗೊಳ್ಳುವರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net