ಬೀದಿನಾಯಿಗಳ ಸಂಖ್ಯೆ, ಸಂಸ್ಥೆಗಳ ಆವರಣದೊಳಗೆ ಬೀದಿನಾಯಿಗಳ ಮರುಪ್ರವೇಶವನ್ನು ತಡೆಯಲು ತಡೆಗೋಡೆ ಕಟ್ಟುವುದು, ತ್ಯಾಜ್ಯ ನಿರ್ವಹಣೆ, ಸ್ವಚ್ಛತೆ ಕಾಪಾಡುವುದು, ಪಾಲಿಕೆಯೊಂದಿಗೆ ಸಮನ್ವಯ ಸಾಧಿಸಲು ಒಬ್ಬ ಅಧಿಕಾರಿಯ ನಾಮನಿರ್ದೇಶನ, ಆ ನೋಡಲ್ ಅಧಿಕಾರಿಯ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಆವರಣದಲ್ಲಿ ಪ್ರದರ್ಶಿಸುವುದರ ಜೊತೆಗೆ ಪಾಲಿಕೆಗೆ ನೋಡಲ್ ಅಧಿಕಾರಿಯ ಮಾಹಿತಿ ನೀಡಬೇಕು. ಕ್ರೀಡಾ ಸಂಕೀರ್ಣಗಳು ಮತ್ತು ಕ್ರೀಡಾಂಗಣಗಳು ಆವರಣದಲ್ಲಿ ಬೀದಿನಾಯಿಗಳ ಪ್ರವೇಶ ತಡೆಗಟ್ಟಲು ನಿಗಾ ವಹಿಸಲು ಭದ್ರತಾ ಸಿಬ್ಬಂದಿ ನೇಮಿಸಬೇಕು. ಅವರಿಗೆ ಗೂಗಲ್ ಫಾಮ್ರ್ ಲಿಂಕ್ ಕಳುಹಿಸಲಾಗಿದ್ದು, ಅದರಲ್ಲಿ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಜಿಬಿಎ ತಿಳಿಸಿದೆ.