ಪಾಲಿಕೆಯ ವ್ಯಾಪ್ತಿಯಲ್ಲಿರುವ ಸಂ&ಸಂಸ್ಥೆ ಹಾಗೂ ಸಾರ್ವಜನಿಕ ಪ್ರದೇಶದ ಸುತ್ತಮುತ್ತ ಇರುವ ಶ್ವಾನಗಳನ್ನು ಗುರುತಿಸುವ ಕೆಲಸಗಳು ಈಗಾಗಲೇ ನಡೆದಿದ್ದು. ಪ್ರಮುಖವಾಗಿ ಶಾಲಾ&ಕಾಲೇಜು, ಆಸ್ಪತ್ರೆ, ಬಸ್, ರೈಲು ನಿಲ್ದಾಣದಂತಹ ಜನ ದಟ್ಟಣೆ ಇರುವ ಸ್ಥಳಗಳಿಂದ ಮೊದಲು ತೆರವು ಗೊಳಿಸಲು ತೀರ್ಮಾನಿಸಲಾಗಿದೆ. ಸಂ&ಸಂಸ್ಥೆಗಳಿಗೆ ತಮ್ಮ ಆವರಣದಲ್ಲಿ ಇರುವ ಬೀದಿನಾಯಿಗಳ ಕುರಿತು ಮಾಹಿತಿ ನೀಡಲು ಜಿಬಿಎ ಸೂಚನೆ ನೀಡಿತ್ತು. ಅದೇ ರೀತಿ ಗುರುತಿಸಲಾದ ಎಲ್ಲ ನಾಯಿಗಳನ್ನು ಸ್ಥಳಾಂತರಿಸಿ, ಲಸಿಕೆ, ಸಂತಾನ ಶಕ್ತಿ ಹರಣ ಚಿಕಿತ್ಸೆ ಹಾಗೂ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ವಿವಿಧ ಸಂಸ್ಥೆಗಳು ಕೈಜೋಡಿಸುವಂತೆ ಟೆಂಡರ್ ಆಹ್ವಾನಿಸಲಾಗಿದೆ.