ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ತೆಗೆದರೆ ಪಕ್ಷಕ್ಕೆ ತುಂಬಲಾರದ ನಷ್ಟವಾಗಲಿದೆ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರು, ಕಾಂಗ್ರೆಸ್ಸಿನ ಕಾಯಂ ಮತದಾರರು. ಒಕ್ಕಲಿಗರು, ಲಿಂಗಾಯತರು ಸೇರಿ ಇತರ ಜಾತಿಗಳು ಕಾಂಗ್ರೆಸ್‌ನ ಕಾಯಂ ಮತದಾರರಲ್ಲ. ಅಹಿಂದ ಸಮುದಾಯಗಳ ಹೆಚ್ಚಿನ ಮತ ಪಡೆದು ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದಲೂ ಪ್ರಬಲ ಸಮುದಾಯದವರೇ ಸಿಎಂ ಮತ್ತು ಮಂತ್ರಿ ಪದವಿಯನ್ನು ಪಡೆದಿದ್ದಾರೆ. ಇದರಿಂದಾಗಿ ಅಹಿಂದ ಸಮುದಾಯಗಳ ರಾಜಕೀಯ ನಾಯಕರು ಅವಕಾಶದಿಂದ ವಂಚಿತರಾಗಿದ್ದಾರೆ ಎಂದು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಖರ್ಗೆಗೆ ಬರೆದಿರುವ ಪತ್ರದಲ್ಲಿ ಅಹಿಂದ ಸಂಘಟನೆ ಸಂಚಾಲಕಿ ವಿಜಯಲಕ್ಷ್ಮಿ ಅರಸ್ ಹೇಳಿದ್ದಾರೆ.