ದೇಶದಲ್ಲೇ ಅತಿ ದೊಡ್ಡ ರೈಲ್ವೆ ಕೋಚಿಂಗ್​ ಟರ್ಮಿನಲ್​ ಯಲಹಂಕದಲ್ಲಿ |yalahanka

ಉದ್ಘಾಟನೆ
ಉದ್ಘಾಟನೆ
Published on

ಪ್ರಮುಖ ಮುಖ್ಯಾಂಶಗಳು

  • 5,754 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
  • ಕೇಂದ್ರ ಸಚಿವ ವಿ. ಸೋಮಣ್ಣ ಮಾಹಿತಿ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಭಾರತದಲ್ಲೇ ಅತೀ ದೊಡ್ಡ ರೈಲ್ವೆ ಮೆಗಾ ಕೋಚಿಂಗ್​ ಟರ್ಮಿನಲ್​​ ಅನ್ನು ಯಲಹಂಕದಲ್ಲಿ 5,754 ಕೋಟಿ ರೂ. ವೆಚ್ಚದಲ್ಲಿ ನಿಮಾರ್ಣ ಮಾಡಲಿದ್ದು, ರೈಲ್ವೆಯ ಈ ಯೋಜನೆ ರಾಜ್ಯದಲ್ಲಿ ಹೊಸ ಅಧ್ಯಾಯ ಶುರು ಮಾಡಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ನಗರದ ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯನ್ನು ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಆರಂಭಿಸಲು ಉದ್ದೇಶಿಸಲಾಗಿತ್ತು. ಆದರೆ, ಈ ಪ್ರದೇಶವು ದೂರ ಎಂಬ ಕಾರಣಕ್ಕಾಗಿ ಯಲಹಂಕದಲ್ಲೇ ಪ್ರಾರಂಭಿಸಲು ಕೇಂದ್ರ ರೈಲ್ವೆ ಮಂಡಳಿಯು ತೀಮಾರ್ನ ಕೈಗೊಂಡಿದೆ ಎಂದರು. ಕೇಂದ್ರ ಸರ್ಕಾರವು ರಾಜ್ಯದ ರೈಲ್ವೆ ಯೋಜನೆಗಳಿಗೆ ಹಣ ನೀಡುತ್ತಿಲ್ಲವೆಂಬ ಸಿಎಂ ಸಿದ್ದರಾಮಯ್ಯರ ಆರೋಪದಲ್ಲಿ ಸತ್ಯಾಂಶವಿಲ್ಲ. ನಿಜವಾಗಿ ಹೇಳಬೇಕೆಂದರೆ ರಾಜ್ಯ ಸರ್ಕಾರವು ರೈಲ್ವೆ ಯೋಜನೆಗೆ ಅಸಹಕಾರ ನೀಡುತ್ತಿದೆ. ಇವರ ಬಳಿ ಹಣ ಇಲ್ಲವೇ ಎಂದು ಮರುಪ್ರಶ್ನೆ ಮಾಡಿದರು.
ಪ್ರಸ್ತುತ ಬಜೆಟ್​ನಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳಿಗೆ 7,748 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ರಾಜ್ಯದಲ್ಲಿ 52,950 ಕೋಟಿ ರೂ. ಮೊತ್ತದ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ. ಬೆಂಗಳೂರು ಕಂಟೋನ್ಮೆಂಟ್​ ಮತ್ತು ವೈಟ್​ಫೀಲ್ಡ್​ ನಡುವಿನ ಚತುಷ್ಪಥ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಯಲಹಂಕದಲ್ಲಿ ಮೆಗಾ ಕೋಚಿಂಗ್​ ರ್ಟಮಿನಲ್​ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಅಲ್ಲದೆ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಮೂಲಸೌಕರ್ಯ ಕಲ್ಪಿಸಲು 485 ಕೋಟಿ ರೂ. ಖರ್ಚು ಮಾಡುತ್ತಿದ್ದೇವೆ ಎಂದು ಸಚಿವರು ಹೇಳಿದರು.
ನಾಲ್ಕು ಪಥದ ಟ್ರ್ಯಾಕ್: ಕೇಂದ್ರ ಸರ್ಕಾರ ರಾಜ್ಯದ ರೈಲ್ವೆ ಯೋಜನೆಗಳಿಗೆ ಸಂಪೂರ್ಣವಾಗಿ ಸಹಕಾರ ನೀಡುತ್ತಿದೆ. ತುಮಕೂರು&-ಬೆಂಗಳೂರು ನಡುವೆ ನಾಲ್ಕು ಪಥದ ರೈಲ್ವೆ ಹಳಿಗೆ ಅನುಮೋದನೆ ನೀಡಲಾಗಿದೆ. ಇದೇ ರೀತಿ ಮೆಜೆಸ್ಟಿಕ್​ ಹಾಗೂ ವೈಟ್​ಫೀಲ್ಡ್​ ಮಧ್ಯೆ ಕೂಡ ನಾಲ್ಕು ಪಥದ ಟ್ರ್ಯಾಕ್​ ಆಗಲಿದೆ. ಇದರಿಂದ ಮೆಜೆಸ್ಟಿಕ್​ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್​ಆರ್​) ರೈಲು ನಿಲ್ದಾಣದ ಮೇಲೆ ಇರುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಹಿಂದಿನ ಯುಪಿಎ ಸರ್ಕಾರ ರಾಜ್ಯಕ್ಕೆ 800 ಕೋಟಿ ರೂ. ಅನ್ನು ರೈಲ್ವೆ ಯೋಜನೆಗಳಿಗೆ ನೀಡಿತ್ತು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದಮೇಲೆ ರಾಜ್ಯಕ್ಕೆ 7,748 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. 52 ಸಾವಿರ ಕೋಟಿ ರೂ. ಯೋಜನೆಗಳು ಚಾಲ್ತಿಯಲ್ಲಿವೆ. 707 ಮೇಲೇತುವೆ ನಿಮಾರ್ಣ ಮಾಡಿದ್ದೇವೆ. 12 ವಂದೇ ಭಾರತ್​ ರೈಲುಗಳು ಸಂಚಾರ ನಡೆಸುತ್ತಿವೆ. ದೇಶದಲ್ಲೇ ಅತೀ ಹೆಚ್ಚು ವಂದೇ ಭಾರತ್​ ರೈಲು ಸಂಚರಿಸುವುದು ಕರ್ನಾಟಕದಲ್ಲಿ ಎಂದು ವಿ. ಸೋಮಣ್ಣ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಪಿ.ಸಿ.ಮೋಹನ್​, ರಾಜ್ಯಸಭಾ ಸದಸ್ಯ ಲೆಹರ್​ ಸಿಂಗ್​ ಸಿರೋಯಾ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆಶುತೋಷ್​ ಕುಮಾರ್​ ಸಿಂಗ್​, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್​ ಮೋಹನ್​ ಪುರಿಯಾ ಉಪಸ್ಥಿತರಿದ್ದರು.
ಕೆಎಸ್​ಆರ್​ ಮಾಸ್ಟರ್​ ಪ್ಲ್ಯಾನ್
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ಸಾರ್ವಜನಿಕ- ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ 1,370 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಮಾಸ್ಟರ್​ ಪ್ಲಾ$್ಯನ್​ ಅನುಮೋದನೆ ಹಂತದಲ್ಲಿದೆ. ವೈಟ್​ಫೀಲ್ಡ್​ನಿಂದ ಕೆಎಸ್​ಆರ್​ ನಿಲ್ದಾಣದವರೆಗಿನ 4 ಪಥದ ರೈಲ್ವೆ ಮಾರ್ಗ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ತುಮಕೂರು&-ಬೆಂಗಳೂರು ನಾಲ್ಕು ಪಥದ ಯೋಜನೆಗೆ ಈಗಾಗಲೇ ಡಿಪಿಆರ್​ ಸಿದ್ಧಪಡಿಸಿ ಕ್ಯಾಬಿನೆಟ್​ಗೆ ಸಲ್ಲಿಸಲಾಗಿದೆ. ವೈಟ್​ಫೀಲ್ಡ್​ನಿಂದ ಕೋಲಾರಕ್ಕೆ ನೇರ ರೈಲು ಸಂಪರ್ಕಕ್ಕಾಗಿ ಸಮೀಕ್ಷೆ ನಡೆಸಲು ಡಿಆರ್​ಎಂ ಅವರಿಗೆ ಸೂಚನೆ ನೀಡಲಾಗಿದೆ ಎಂದು ವಿ.ಸೋಮಣ್ಣ ತಿಳಿಸಿದರು.
ವಿವಿಧ ಯೋಜನೆ ಉದ್ಘಾಟನೆ
ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿ ರೈಲು ಸಂಖ್ಯೆ 16215/16216 ಮೈಸೂರು -ಕೆಎಸ್​ಆರ್​ಆರ್​ ಬೆಂಗಳೂರು-&ಮೈಸೂರು ಚಾಮುಂಡಿ ಎಕ್ಸ್​ಪ್ರೆಸ್​, ರೈಲು ಸಂಖ್ಯೆ 17307/17308 ಮೈಸೂರು& ಬಾಗಲಕೋಟೆ- ಮೈಸೂರು ಬಸವ ಎಕ್ಸ್​ಪ್ರೆಸ್​, ರೈಲು ಸಂಖ್ಯೆ 16235/16236 ತೂತುಕುಡಿ &ಮೈಸೂರು- ಎಕ್ಸ್​ಪ್ರೆಸ್​, ರೈಲು ಸಂಖ್ಯೆ 16535/16536 ಮೈಸೂರು &ಪಂಢರಾಪುರ-/ ಮೈಸೂರು ಗೋಲ್​ಗುಂಬಜ್​ ಎಕ್ಸ್​ಪ್ರೆಸ್​ ರೈಲುಗಳ ನಿಲುಗಡೆಗೆ ಚಾಲನೆ ಮತ್ತು ವಿಜಯನಗರ ಹಾಗೂ ಪಾದರಾಯನಪುರ ನಡುವಿನ ರಸ್ತೆ ಮೇಲ್ಸೇತುವೆ ಉದ್ಘಾಟನೆಯನ್ನು ಸಚಿವರು ನೆರವೇರಿಸಿದರು.
ಮುಖ್ಯಾಂಶ
* ಕೇಂದ್ರ ಸರ್ಕಾರವು ರಸ್ತೆ ಕೆಳ ಸೇತುವೆ/ ರಸ್ತೆ ಮೇಲ್ಸೇತುವೆ ನಿರ್ಮಿಸುವ ಮೂಲಕ ಲೆವೆಲ್​ ಕ್ರಾಸಿಂಗ್​ ಗೇಟ್​ಗಳನ್ನು ತೆಗೆದುಹಾಕಲು ಆದ್ಯತೆ ನೀಡಿದೆ.
* 14 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಮೇಲ್ಸೇತುವೆಯನ್ನು ನಿರ್ಮಿಸಿದ್ದು, ಗೋರಿಪಾಳ್ಯ, ವಿಜಯನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಪ್ರಯೋಜನವಾಗಲಿದೆ.

ಕೇಂದ್ರ ಸರ್ಕಾರ ರಾಜ್ಯಕ್ಕೆ ಯಾವ ರೀತಿ ಅನ್ಯಾಯ ಮಾಡಿದೆ. ಒಟ್ಟು ನಾಲ್ಕು ಎಕ್ಸ್​ಪ್ರೆಸ್​ ರೈಲು ನಿಲುಗಡೆಗೆ ಚಾಲನೆ ನೀಡಲಾಗಿದೆ. ಸಾಂಕೇತಿಕವಾಗಿ ಮೈಸೂರು&-ಬಾಗಲಕೋಟೆ ಎಕ್​ಪ್ರೆಸ್​ ರೈಲಿಗೆ ಚಾಲನೆ ನೀಡಲಾಗಿದೆ. ಇಷ್ಟೆಲ್ಲ ಮಾಡಿದರೂ ನಮ್ಮ ಸಿಎಂ ಸಿದ್ದರಾಮಯ್ಯನವರು ತಲೆ ಬುರುಡೆ ಇಲ್ಲದಂತೆ ಮಾತನಾಡುತ್ತಾರೆ. 100 ಕೋಟಿ ರೂ. ವೆಚ್ಚದಲ್ಲಿ ತುಮಕೂರು ರೈಲ್ವೆ ನಿಲ್ದಾಣ ಅಭಿವೃದ್ಧಿ ಕೈಗೆತ್ತಿಕೊಂಡಿದ್ದು, ಈಗಾಗಲೇ ಕಾಮಗಾರಿ ಆರಂಭವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net