ಪ್ರಾಣಿ ಕಲ್ಯಾಣ ಮಂಡಳಿ ಹಾಗೂ ಸುಪ್ರೀಂ ಕೋರ್ಟ್ ಆದೇಶವನ್ನು ಚಾಚೂ ತಪ್ಪದೆ ಪಾಲನೆ ಮಾಡಲಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ನಾಯಿಗಳ ಬಗ್ಗೆಯೂ ಕಾಳಜಿ ವಹಿಸಿ, ವ್ಯವಸ್ಥಿತ ಪ್ರದೇಶವಿದ್ದಲ್ಲಿ ಮಾತ್ರ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳುತ್ತಿದ್ದೇವೆ ಎನ್ನುತ್ತಿದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ). ಶ್ವಾನಗಳನ್ನು ಪ್ರಮುಖವಾಗಿ ಶಾಲಾ&ಕಾಲೇಜು, ಆಸ್ಪತ್ರೆ, ಬಸ್, ರೈಲು ನಿಲ್ದಾಣದಂತಹ ಜನದಟ್ಟಣೆ ಇರುವ ಸ್ಥಳಗಳಿಂದ ತೆರವುಗೊಳಿಸಲು ಸಂ&ಸಂಸ್ಥೆಗಳಿಗೆ ಜಿಬಿಎ ಸೂಚನೆ ನೀಡಿತ್ತು. ಸಂಸ್ಥೆಯ ಆವರಣದಲ್ಲಿ ಇರುವ ಬೀದಿನಾಯಿಗಳನ್ನು ಗುರುತಿಸಿ ಜಿಬಿಎಗೆ ಮಾಹಿತಿ ರವಾನಿಸುವಂತೆ ತಿಳಿಸಿತ್ತು. ಗೂಗಲ್ ಾಮ್ರ್ ಮೂಲಕವೂ ಮಾಹಿತಿ ಸಂಗ್ರಹ ಕಾರ್ಯ ನಡೆಯುತ್ತಿದೆ. ಆ ಪೈಕಿ ಕೆಲವು ಪಾಲಿಕೆಗಳು ತುಂಬಾ ಕಡಿಮೆ ಸಂಸ್ಥೆಗಳನ್ನು ತಲುಪಿದ್ದು, ಅವರಿಗೆ ಲಭಿಸಿದ ಮಾಹಿತಿಯೂ ತೀರ ಕಡಿಮೆ ಎನಿಸಿದೆ. ಬಸ್, ರೈಲು ನಿಲ್ದಾಣ ಇತ್ಯಾದಿ ಜನ ಸಂಚಾರ ಹೆಚ್ಚಿರುವ ಸ್ಥಳಗಳಿಂದ ಗುರುತಿಸುವ ಶ್ವಾನಗಳ ಸಂಪೂರ್ಣ ಜವಾಬ್ದಾರಿಯನ್ನು ಜಿಬಿಎ ಹೊತ್ತುಕೊಂಡಿದೆ.