ನಗರದ ಜನಸಂಖ್ಯೆ ಹಾಗೂ ವಿಸ್ತರಣೆಯನ್ನು ಗಮನದಲ್ಲಿಟ್ಟುಕೊಂಡು ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ, ಮಾರುಕಟ್ಟೆ, ಉದ್ಯಾನ, ಪ್ರವಾಸಿ ತಾಣ ಹಾಗೂ ಜನಸಂದಣಿ ಪ್ರದೇಶಗಳಿಗೆ ಆದ್ಯತೆ ನೀಡಿ 1,000ಕ್ಕೂ ಹೆಚ್ಚು ಆಧುನಿಕ ಸಾರ್ವಜನಿಕ ಶೌಚಗೃಹಗಳನ್ನು ನಿರ್ಮಿಸಬೇಕೆಂದು ಬಿ.ಪ್ಯಾಕ್ ಮುಖ್ಯಸ್ಥ ಎಚ್.ಎಸ್.ರಾಘವೇಂದ್ರ ಪೂಜಾರಿ ಸರ್ಕಾರ ಹಾಗೂ ಜಿಬಿಎಗೆ ಮನವಿ ಮಾಡಿದ್ದಾರೆ.