ಒಟಿಎಸ್​ ಸಂಗ್ರಹ ಮೊತ್ತ ಕಡಿಮೆ| bwssb

ಜಲಮಂಡಳಿ
ಜಲಮಂಡಳಿ
Published on

ಪ್ರಮುಖ ಮುಖ್ಯಾಂಶಗಳು

  • ಯೋಜನೆಯಡಿ 30ರ ತನಕ ನೀರಿನ ಬಿಲ್​ ಪಾವತಿಸಲು ಅವಕಾಶ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನೀರಿನ ಬಿಲ್​ನ ಬಾಕಿ ಮೊತ್ತ ಸಂಗ್ರಹಣೆಗೆ ಏಕಕಾಲಿಕ ಇತ್ಯರ್ಥ ವ್ಯವಸ್ಥೆ (ಒಟಿಎಸ್​) ಜಾರಿಗೆ ತಂದಿದ್ದರೂ, 2 ತಿಂಗಳಲ್ಲಿ ಸಂಗ್ರಹವಾದ ಮೊತ್ತ ಕಡಿಮೆ ಇದೆ.
ಗ್ರಾಹಕರು ಪಾವತಿಸಲು ಬಾಕಿ ಇರುವ ನೀರಿನ ಬಿಲ್​ನ ಅಸಲು ಮೊತ್ತವನ್ನು ಏಕಕಾಲದಲ್ಲಿ ಪಾವತಿಸುವಂತಾಗಲು  ಬಡ್ಡಿ, ದಂಡ ಹಾಗೂ ಇತರೆ ಶುಲ್ಕಗಳು ಶೇ.100 ಮನ್ನಾ ಮಾಡಿ, ಯೋಜನೆಯನ್ನು ಏಪ್ರಿಲ್​ನಲ್ಲಿ ಜಾರಿಗೆ ತಂದಿದೆ. ಏಪ್ರಿಲ್​ ಹಾಗೂ ಮೇನಲ್ಲಿ ಯೋಜನೆಯ ಒಟ್ಟು ಸಂಗ್ರಹ ಸುಮಾರು 58 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಜೂ.30ರ ತನಕ ಬಿಲ್​ ಪಾವತಿಸಲು ಅವಕಾಶವಿದೆ.
ಗ್ರಾಹಕರನ್ನು ತಲುಪುವಲ್ಲಿ ವಿಲ:
ಒಟಿಎಸ್​ ವ್ಯವಸ್ಥೆಯನ್ನು 3 ತಿಂಗಳ ಸೀಮಿತ ಅವಧಿಗೆ ಜಾರಿಗೊಳಿಸಲಾಗಿದ್ದು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬಾಕಿಯಾದ ಮೊತ್ತಗಳನ್ನು ಲೆಕ್ಕಪತ್ರದಲ್ಲಿ ಸಮನ್ವಯಗೊಳಿಸಲು ರೂಪಿಸಲಾಗಿದೆ. ಆದರೆ, ಯೋಜನೆಯಿಂದ ಎರಡು ತಿಂಗಳಲ್ಲಿ ಶೇ.10 ಸಂಗ್ರಹದ ಗುರಿಯನ್ನು ತಲುಪಲು ಆಗಿಲ್ಲ. ಯೋಜನೆಯು ಗೃಹ ಮತ್ತು ವಾಣಿಜ್ಯ ಸಂಪರ್ಕ ಹೊಂದಿರುವ ಗ್ರಾಹಕರು ಬಾಕಿ ಹಣವನ್ನು ಸುಲಭವಾಗಿ ಪಾವತಿಸಲು ಅವಕಾಶ ಕಲ್ಪಿಸಿದೆಯಾದರೂ, ಗ್ರಾಹಕರನ್ನು ತಲುಪುವಲ್ಲಿ ವಿಲವಾಗಿದೆ.
ೆಬ್ರವರಿ ವರೆಗೆ ಗ್ರಾಹಕರು ಉಳಿಸಿಕೊಂಡಿರುವ ನೀರಿನ ಬಾಕಿ ಒಟ್ಟು ಮೊತ್ತ 701.71 ಕೋಟಿ ರೂ. ಆಗಿದ್ದು, ಈ ಮೊತ್ತದಲ್ಲಿ ಅಸಲು ಮೊತ್ತವು 439.03 ಕೋಟಿ ರೂ. ಆಗಿದೆ. ಅಲ್ಲದೆ, 262.68 ಕೋಟಿ ರೂ.ಗಳು ಬಾಕಿ ಇರುವ ಬಡ್ಡಿ ಮೊತ್ತವಾಗಿದೆ. ಗ್ರಾಹಕರಿಂದ ನೀರಿನ ಬಿಲ್​ನ ಬಾಕಿ ಮೊತ್ತವನ್ನು ಸಂಗ್ರಹಿಸುವ ದೃಷ್ಟಿಯಿಂದ ಬಡ್ಡಿ ಮೊತ್ತವನ್ನು ಮನ್ನಾ ಮಾಡಿ, ಅಸಲು ಮಾತ್ರ ಪಡೆದುಕೊಳ್ಳಲು ಜಲಮಂಡಳಿ ತೀರ್ಮಾನಿಸಿ, ಸದರಿ ಯೋಜನೆಯನ್ನು ಜಾರಿಗೆ ತಂದಿದೆ.
ಲೆಕ್ಕ ಚುಪ್ತಾ ಮಾಡಿ
ನೀರು ಮೂಲಭೂತ ಅಗತ್ಯವಾಗಿರುವ ಕಾರಣ ನೀರಿನ ಸಂಪರ್ಕ ಕಡಿತಗೊಳಿಸುವುದು ತುಂಬ ಕಷ್ಟ. ಸಾರ್ವಜನಿಕರಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ನೀರಿನ ಸರಬರಾಜನ್ನು ಸ್ಥಗಿತಗೊಳಿಸಲಾಗಲಿಲ್ಲ. ಇದನ್ನೇ ಕೆಲವು ಸಂಸ್ಥೆಗಳು ದುರುಪಯೋಗಪಡಿಸಿಕೊಂಡು ನಿರಂತರವಾಗಿ ಬಾಕಿ ಉಳಿಸಿಕೊಂಡಿವೆ. ಆದರೆ, ಈ ಆರ್​ ಮೂಲಕ ಬಾಕಿ ಮೊತ್ತವನ್ನು ಪಾವತಿಸಲು ಬಾಕಿ ಇರುವವರು ಒಂದು ತಿಂಗಳ ಅವಧಿನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net