ಬೆಂಗಳೂರು: ರೈಲು ಪ್ರಯಾಣ ಆರಾಮದಾಯಕವಾಗಿದ್ದರೂ, ಊಟ& ತಿಂಡಿ ವಿಚಾರವಾಗಿ, ನಿಲ್ದಾಣದಲ್ಲಿ ದೊರೆಯುವ ಆಹಾರ ಗುಣಮಟ್ಟದ ಬಗ್ಗೆ ಕೆಲವೊಮ್ಮೆ ಅಪಸ್ವರಗಳು ಕೇಳಿ ಬರುತ್ತಲೇ ಇರುತ್ತದೆ. ಇದೀಗ ಅದಕ್ಕೆಲ್ಲ ಪರಿಹಾರ ಸಿಗುತ್ತಿದೆ. ಆಹಾರ ವಿತರಣೆ ಸಂಸ್ಥೆ ಸ್ವಿಗಿ ಮತ್ತು ಭಾರತೀಯ ರೈಲ್ವೆಯ ಐಆರ್ಸಿಟಿಸಿ ಕೈಜೋಡಿಸಿದ್ದು, ಇನ್ನು ರೈಲಿನಲ್ಲಿ ಕುಳಿತೇ ಪ್ರಯಾಣಿಕರು ತಮಗಿಷ್ಟವಾದ ಆಹಾರ ಸವಿಯಬಹುದಾಗಿದೆ. ರೈಲಿನಲ್ಲಿ ಕುಳಿತು ಆಹಾರವನ್ನು ಆರ್ಡರ್ ಮಾಡಿದರೆ, ರೈಲು ಮುಂದಿನ ನಿಲ್ದಾಣ ತಲುಪುವಷ್ಟರಲ್ಲಿ, ಅವರು ಆಯ್ಕೆ ಮಾಡಿದ ಹೋಟೆಲ್ನಿಂದ ಆಹಾರ ಗ್ರಾಹಕರ ಕೈ ಸೇರಲಿದೆ. ಸ್ವಿಗಿ ಮೂಲಕ ವಿವಿಧ ಹೋಟೆಲ್ಗಳಿಂದ ತಮ್ಮ ಇಷ್ಟದ ಆಹಾರವನ್ನು ಆಯ್ಕೆ ಮಾಡಿ, ತೃಪ್ತಿಯಿಂದ ಪ್ರಯಾಣವನ್ನು ಮುಂದುವರಿಸಬಹುದಾಗಿದೆ. ಈ ಸೇವೆ ಈಗ ದೇಶದ ನೂರಾರು ನಿಲ್ದಾಣಗಳಲ್ಲಿ ಲಭ್ಯವಾಗುತ್ತಿದ್ದು, ಸ್ಥಳಿಯವಾಗಿ ಪ್ರಸಿದ್ಧ ಹೋಟೆಲ್ಗಳ ಆಹಾರವನ್ನು ಕೂಡ ಪರಿಚಯಿಸುತ್ತಿದೆ.