ಯೋಜನೆಯಡಿ ಬೈರಮಂಗಲದಲ್ಲಿ ದಿನಕ್ಕೆ 100 ಎಂಎಲ್ಡಿ ಸಾಮರ್ಥ್ಯದ ಒಳಚರಂಡಿ ನೀರು ಶುದ್ಧೀಕರಣ ಘಟಕ (ಎಸ್ಟಿಪಿ), 25 ಎಂಎಲ್ಡಿ ಸಾಮರ್ಥ್ಯದ ತೃತೀಯ ಹಂತದ ಶುದ್ಧೀಕರಣ ಘಟಕಕ್ಕೆ (ಟಿಟಿಪಿ) 259 ಕೋಟಿ ರೂ. ಹಾಗೂ ಬೆಳ್ಳಂದೂರಿನಲ್ಲಿ 60 ಎಂಎಲ್ಡಿ ಸಾಮರ್ಥ್ಯದ ಮತ್ತೊಂದು ಎಸ್ಟಿಪಿ ನಿಮಾರ್ಣಕ್ಕೆ 171 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಘಟಕಗಳ ವಿನ್ಯಾಸ, ಇಂಜಿನಿಯರಿಂಗ್, ಖರೀದಿ, ನಿಮಾರ್ಣ, ಪರೀಕ್ಷೆ ಮತ್ತು ಕಾರ್ಯಾರಂಭ ಸೇರಿ ಸಂಪೂರ್ಣ ಇಪಿಸಿ ಕಾಮಗಾರಿಯನ್ನು ವಾಬ್ಯಾಗ್ ನಿರ್ವಹಿಸಲಿದೆ.