ಸೋಲದೇವನಹಳ್ಳಿ ಡಿಪೋ ನಿಮಾರ್ಣಕ್ಕೆ ಟೆಂಡರ್​| metro

ಮೆಟ್ರೋ
ಮೆಟ್ರೋ
Published on

ಪ್ರಮುಖ ಮುಖ್ಯಾಂಶಗಳು

  • ನಗರದ ಉಪನಗರ ರೈಲು ಸೇವೆಗಳ ಕಾರ್ಯಾಚರಣೆಗೆ ವೇಗ
ಬೆಂಗಳೂರು: ನಗರದ ಉಪನಗರ ರೈಲು ಸೇವೆಗಳ ಕಾರ್ಯಾಚರಣೆಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸಲಿರುವ ಸೋಲದೇವನಹಳ್ಳಿ ರೈಲು ನಿರ್ವಹಣಾ ಘಟಕದ ನಿಮಾರ್ಣಕ್ಕಾಗಿ ಬೆಂಗಳೂರು ಇಂಟಿಗ್ರೇಟೆಡ್​ ರೈಲ್​ ಇನ್​್ರಾಸ್ಟ್ರಕ್ಚರ್​ ಡೆವಲಪ್​ಮೆಂಟ್​ ಎಂಟರ್​ಪ್ರೈಸಸ್​ (ಬಿ&ರೈಡ್​) ಟೆಂಡರ್​ ಆಹ್ವಾನಿಸಿದೆ.
ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್​ಟಿಪಿ) ನಿರ್ವಹಣಾ ಘಟಕದ ಟೆಂಡರ್​ಗೆ ಜಿಎಸ್​ಟಿ ಹೊರತುಪಡಿಸಿ 200.03 ಕೋಟಿ ರೂ.ನಿಗದಿಪಡಿಸಲಾಗಿದೆ. ಹಾಗೆಯೇ, ಈ ಟೆಂಡರ್​ ಕಾಮಗಾರಿಗೆ ಬಿಡ್​ ಸಲ್ಲಿಸಲು ಆ.12 ಕೊನೆಯ ದಿನವಾಗಿದೆ.
ಚೆನ್ನೈನ ಇಂಟೆಗ್ರಲ್​ ಕೋಚ್​ ಫ್ಯಾಕ್ಟರಿಗೆ (ಐಸಿಎ್​) 153 ಬೋಗಿಗಳ ಪೂರೈಕೆಗಾಗಿ 2026ರ ಮೇ 6 ರಂದು ಕಾರ್ಯಾದೇಶ ನೀಡಿದ ಬೆನ್ನಲ್ಲೇ, ನೂತನ ರೈಲುಗಳ ನಿರ್ವಹಣೆಗೆ ಡಿಪೋ ನಿರ್ಮಿಸಲಾಗುತ್ತಿದೆ. ಚಿಕ್ಕಬಾಣಾವರ ಉಪನಗರ ರೈಲು ನಿಲ್ದಾಣದ ಸಮೀಪ ನಿಮಾರ್ಣವಾಗಲಿರುವ ಈ ಘಟಕವು ಕಾರಿಡಾರ್​ 2 ಮತ್ತು ಕಾರಿಡಾರ್​ 4 ರ ರೈಲುಗಳ ಕಾರ್ಯಾಚರಣೆ ಹಾಗೂ ನಿರ್ವಹಣೆಯ ಹೊಣೆ ಹೊರಲಿದೆ. ಈ ಬೃಹತ್​ ಯೋಜನೆಗಾಗಿ ಈಗಾಗಲೇ 26 ಎಕರೆ ಖಾಸಗಿ ಭೂಮಿಯನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ.
ಇತ್ತೀಚೆಗಷ್ಟೇ 153 ಅತ್ಯಾಧುನಿಕ ಬೋಗಿಗಳಿಗೆ ಆರ್ಡರ್​ ನೀಡಲಾಗಿದ್ದು, ಅವುಗಳ ನಿರ್ವಹಣೆ ಮತ್ತು ಸುರಕ್ಷತಾ ತಪಾಸಣೆಗೆ ಅಗತ್ಯವಿರುವ ವಿಶ್ವದರ್ಜೆಯ ಕಾರ್ಯಾಗಾರವನ್ನು ಸೋಲದೇವನಹಳ್ಳಿ ಡಿಪೋ ಒದಗಿಸಲಿದೆ. ಬೆಂಗಳೂರಿನ ಜನತೆಗೆ ಉತ್ತಮ ಹಾಗೂ ಹೈ ಪ್ರೀಕ್ವೆನ್ಸಿ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಉಪನಗರ ಸಾರಿಗೆಯನ್ನು ಒದಗಿಸುವ ಕಾರ್ಯತಂತ್ರದ ಭಾಗವಾಗಿದೆ ಎಂದು ಬಿ&ರೈಡ್​ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್​ ಸಿಂಗ್​ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net