ದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಪ್ರಶಸ್ತಿ ಪ್ರದಾನ ವಾಡಿದರು. ಕರ್ನಾಟಕದಲ್ಲಿ 6000ಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ದೇಶದ ಇವಿ ಚಾಜಿರ್ಂಗ್ ಮೂಲಸೌಕರ್ಯವನ್ನು ಅಳವಡಿಸಿಕೊಂಡ ಅತ್ಯುತ್ತಮ ರಾಜ್ಯವೆಂದು ಗುರುತಿಸಿ ಕರ್ನಾಟಕಕ್ಕೆ ಚಿನ್ನದ ಪ್ರಶಸ್ತಿ ನೀಡಲಾಗಿದೆ. ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳಲ್ಲಿ ಇವಿ ಅಳವಡಿಕೆ ಹಾಗೂ 1568ಕ್ಕೂ ಅಧಿಕ ಇವಿ ಬಸ್‌ಗಳ ಅವಳಡಿಕೆಯನ್ನು ಗುರುತಿಸಿ ಪ್ರತ್ಯೇಕವಾಗಿ ಎರಡು ಬೆಳ್ಳಿ ಪ್ರಶಸ್ತಿಗಳನ್ನು ನೀಡಲಾಗಿದೆ. ಇದರಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಸಾರ್ವಜನಿಕ ಸಾರಿಗೆಯನ್ನು ವಿದ್ಯುದ್ದೀಕರಿಸುವಲ್ಲಿನ ಪ್ರಗತಿಗಾಗಿ ಈ ಪ್ರಶಸ್ತಿ ನೀಡಲಾಗಿದೆ. ವಿದ್ಯುತ್ ಚಾಲಿತ ವಾಹನಗಳ ತಯಾರಿಕಾ ಕಂಪನಿಗಳಿಗೆ ಅಗತ್ಯ ಬೆಂಬಲ ಸೂಚಿಸುವ ಮೂಲಕ ಪ್ರಬಲ ರಾಜ್ಯವಾಗಿ ಹೊರಹೊಮ್ಮಿರುವುದಕ್ಕೆ ಪ್ರಶಂಸೆ ಸಿಕ್ಕಿದೆ.