ಹಳದಿ ಮಾರ್ಗಕ್ಕೆ 15ನೇ ರೈಲು ಸೇರ್ಪಡೆ

ಮೆಟ್ರೋ
ಮೆಟ್ರೋ
Published on
ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದ ಕೊನೆಯ 15ನೇ ಟೆನ್ಸೆಟ್​ ಬೆಂಗಳೂರಿಗೆ ತಲುಪಿದೆ. ಇದರೊಂದಿಗೆ ಹಳದಿ ಮಾರ್ಗಕ್ಕೆ ಒಟ್ಟು ಬೇಕಿರುವ 15 ರೈಲುಗಳ ಪೂರೈಕೆಯಾಗಿದೆ. ಈ ಪೈಕಿ 13 ರೈಲುಗಳನ್ನು ಈಗಾಗಲೇ ಕಾರ್ಯಾಚರಣೆಗೆ ಬಳಸಲಾಗುತ್ತಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ತಿಳಿಸಿದೆ.
ಆರ್​.ವಿ. ರಸ್ತೆ&ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ದಿನದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈಲುಗಳ ಸಂಖ್ಯೆಯನ್ನು ಹೆಚ್ಚಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಹೆಚ್ಚಿನ ರೈಲುಗಳ ಸಂಚಾರದಿಂದ ಪೀಕ್​ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಲಿದ್ದು, ರೈಲುಗಳ ನಡುವಿನ ಕಾಯುವಿಕೆ ಸಮಯವೂ ಇಳಿಕೆಯಾಗುವ ನಿರೀಕ್ಷೆಯಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net