ವೈಟ್​ಫೀಲ್ಡ್​ ಮೆಟ್ರೋ ನಿಲ್ದಾಣದಾಚೆ ಮಾರ್ಗ ವಿಸ್ತರಣೆಗೆ ಟೆಂಡರ್​ ಆಹ್ವಾನ| metro

ಮೆಟ್ರೋ
ಮೆಟ್ರೋ
Published on
ಬೆಂಗಳೂರು: ಮೆಟ್ರೋ ರೈಲು ಜಾಲವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ವೈಟ್​ಫೀಲ್ಡ್​ ಮೆಟ್ರೋ ನಿಲ್ದಾಣದಾಚೆಗೆ ಮಾರ್ಗ ವಿಸ್ತರಣೆ ಕಾಮಗಾರಿಗೆ ಟೆಂಡರ್​ ಆಹ್ವಾನಿಸಿದೆ.
ಯೋಜನೆಗೆ ಅಂದಾಜು ವೆಚ್ಚ 62.51 ಕೋಟಿ ರೂ. ಆಗಲಿದ್ದು, ಹಂತ&2ರ ರೀಚ್​, 1ಬಿ ವ್ಯಾಪ್ತಿಯಲ್ಲಿ ಈಗಿರುವ ವೈಟ್​ಫೀಲ್ಡ್​ ನಿಲ್ದಾಣದಾಚೆಗೆ 482.80 ಮೀಟರ್​ ಉದ್ದದ ಮೆಟ್ರೋ ಮಾರ್ಗ ನಿಮಾರ್ಣವಾಗಲಿದೆ. ಟೆಂಡರ್​ ಪ್ರಕಾರ ಆಯ್ಕೆಯಾಗುವ ಗುತ್ತಿಗೆದಾರರು 18 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಬೇಕಿದೆ.
ವೈಟ್​ಫೀಲ್ಡ್​ ಪ್ರದೇಶವು ಬೆಂಗಳೂರಿನ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಐಟಿ ಹಾಗೂ ವಸತಿ ಕೇಂದ್ರಗಳಲ್ಲಿ ಒಂದಾಗಿದೆ. ಈ ಭಾಗದಿಂದ ಪ್ರತಿದಿನ ಸಾವಿರಾರು ಪ್ರಯಾಣಿಕರು ಮೆಟ್ರೋ ಸೇವೆಯನ್ನು ಬಳಸುತ್ತಿದ್ದಾರೆ. ಹೊಸ ವಿಸ್ತರಣೆ ಕಾಮಗಾರಿ ಪೂರ್ಣಗೊಂಡ ಬಳಿಕ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ಬಲ ಸಿಗಲಿದೆ.
ಟೆಂಡರ್​ಗೆ ಅರ್ಜಿ ಸಲ್ಲಿಸುವ ಕಂಪನಿಗಳಿಗೆ 59,000 ರೂ. ಶುಲ್ಕ ವಿಧಿಸಲಾಗಿದ್ದು, ಕಾಮಗಾರಿ ಕುರಿತ ದಾಖಲೆ ಪಡೆಯಲು ಜೂ.29ರವರೆಗೆ ಅವಕಾಶವಿರಲಿದ್ದು, 23ರಿಂದ 29ರೊಳಗೆ ಅರ್ಜಿ ಸಲ್ಲಿಸಬಹುದು. ಪೂರ್ವ-ಟೆಂಡರ್​ ಸಭೆಯನ್ನು 16ರಂದು ಆಯೋಜಿಸಲಾಗಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net