19.75 ಕಿ.ಮೀ. ಉದ್ದದ ಸಿಲ್ಕ್ಬೋರ್ಡ್& ಕೆ.ಆರ್. ಪುರ ಮಾರ್ಗವು ಪೂರ್ಣಗೊಂಡರೆ ನಗರದ ಪ್ರಮುಖ ಐಟಿ ಪ್ರದೇಶಗಳಾದ ಬೆಳ್ಳಂದೂರು, ದೇವರಬೀಸನಹಳ್ಳಿ, ಕಾಡುಬೀಸನಹಳ್ಳಿ, ಮಾರತ್ತಹಳ್ಳಿ ಮತ್ತಿತರ ಭಾಗಗಳಿಗೆ ಸಾರ್ವಜನಿಕ ಸಾರಿಗೆ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದೆ. ಈ ಮಾರ್ಗವು ಈಗಾಗಲೇ ತೀವ್ರ ವಾಹನ ದಟ್ಟಣೆಯಿಂದ ಬಳಲುತ್ತಿರುವ ಹೊರವರ್ತುಲ ರಸ್ತೆಗೆ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಿದೆ.