ಲಯನ್ಸ್‌ನಿಂದ ಬಡವರಿಗಾಗಿ ಸೇವಾಕಾರ್ಯ | LIONS

ಲಯನ್ಸ್ ಇಂಟರ್​ನ್ಯಾಷನಲ್​ನ ಪ್ರದೇಶಿಕ ಕಾರ್ಯಕ್ರಮ
ಲಯನ್ಸ್ ಇಂಟರ್​ನ್ಯಾಷನಲ್​ನ ಪ್ರದೇಶಿಕ ಕಾರ್ಯಕ್ರಮ
Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಶ್ಲಾಘನೆ
  • ಪ್ರಾಂತೀಯ ಸಮ್ಮೇಳನದಲ್ಲಿ ವಿವಿಧ ಸೇವೆಗಳಿಗೆ ಚಾಲನೆ
ಬೆಂಗಳೂರು: ಬಡವರಿಗಾಗಿ ಸೇವೆ ಒದಗಿಸುವಲ್ಲಿ ಲಯನ್ಸ್ ಸಂಸ್ಥೆ ಮುಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಬಡವರಿಗಾಗಿ ಅನೇಕ ಸೇವಾಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು. 
ಯಶವಂತಪುರದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲಾ 317ಎಫ್​ 2ನೇ ಪ್ರಾಂತೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಆರೋಗ್ಯ ಕ್ಷೇತ್ರ ಸೇರಿ ಬಡವರಿಗಾಗಿ ಬೇರೆಬೇರೆ ಕ್ಷೇತ್ರಗಳಲ್ಲಿ ಲಯನ್ಸ್ ಸಂಸ್ಥೆ ಉಚಿತ ಸೇವೆಯನ್ನು ನೀಡುತ್ತಿದೆ ಎಂದು ಹೇಳಿದರು. 
ಶೇಷಾದ್ರಿಪುರಂ ಕಾಲೇಜ್ನ ಕಾರ್ಯದರ್ಶಿ ನಾಡೋಜ ಡಾ.ಬೂಡೇ ಪಿ. ಕೃಷ್ಣ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಯನ್ಸ್ ಸಂಸ್ಥೆ ಅನೇಕ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು, ಅದರಲ್ಲೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ, ಪ್ರತಿದಿನ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಮ್ಮೇಳನದ ಅಂಗವಾಗಿ 20 ಲಕ್ಷಕ್ಕೂ ಹೆಚ್ಚಿನ ಸೇವಾ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. 
ಲಯನ್ ಜಿಲ್ಲಾ ಗವರ್ನರ್ ಆಕಾಶ ಸುವರ್ಣ, ಮಾಜಿ ಜಿಲ್ಲಾ ಗವರ್ನರ್‌ಗಳಾದ ಸಿ.ಎಂ. ನಾರಾಯಣಸ್ವಾಮಿ, ಎಂ. ಅಶ್ವತಯ್ಯ, ಕೆ.ಎಲ್.ಸುಬ್ರಹ್ಮಣ್ಯಂ ಸೇರಿ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net