ನಗರದಲ್ಲಿ ಕಲ್ಯಾಣ ಮಂಟಪಗಳ ಬಾಡಿಗೆ ಲಕ್ಷಾಂತರ ರೂ. ಆಗಿರುವ ಸಂದರ್ಭದಲ್ಲಿ ಅನಕೃ ಕನ್ವೆನ್ಷನ್ ಸೆಂಟರ್ ಅನ್ನು ಮದುವೆ ಕಾರ್ಯಕ್ರಮಗಳಿಗೆ ಕೇವಲ 70 ಸಾವಿರ ರೂ.ಗೆ ಲಭ್ಯವಾಗುವಂತೆ ಮಾಡಲಾಗಿದೆ. ಎ.ಸಿ. ಸೌಕರ್ಯವುಳ್ಳ ಸಭಾಂಗಣದಲ್ಲಿ 600ರಿಂದ 700 ಆಸನ ವ್ಯವಸ್ಥೆಯಿದೆ. 300ಕ್ಕೂ ಹೆಚ್ಚು ಜನರಿಗೆ ಏಕಕಾಲದಲ್ಲಿ ಊಟ ಮಾಡಬಹುದಾಗಿದೆ. 8 ವಿಶಾಲ ಕೊಠಡಿಗಳಿದ್ದು, ಅತ್ಯಾಧುನಿಕ ಧ್ವನಿ ವ್ಯವಸ್ಥೆ ಹಾಗೂ ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳಿವೆ. ಡಾ. ಪುನೀತ್ ಸಭಾಂಗಣವನ್ನು 25 ಸಾವಿರ ರೂ. ಬಾಡಿಗೆಯಲ್ಲಿ ಬಳಸಿಕೊಳ್ಳಬಹುದಾಗಿದೆ. ಚಲನಚಿತ್ರಗಳ ಆಡಿಯೋ-, ವಿಡಿಯೋ ಬಿಡುಗಡೆ ಕಾರ್ಯಕ್ರಮಗಳು, ನಾಟಕ, ಸಾಂಸತಿಕ ಕಾರ್ಯಕ್ರಮಗಳು, ಶಾಲಾ&-ಕಾಲೇಜುಗಳ ವಾರ್ಷಿಕೋತ್ಸವಗಳಿಗೆ ಇದು ವೇದಿಕೆಯಾಗಲಿದೆ.