ಒಂದು ಸಸಿ ನೆಡಲು ಸುಮಾರು 2,300 ರೂ. ವೆಚ್ಚ : ಗುಂಡಿ ತೋಡುವುದು, ಮುಚ್ಚುವುದು, ಸಸಿ ಖರೀದಿ, ರಣಾ ಕವಚ ಅಳವಡಿಕೆ, ಕಡ್ಡಿ ಅಳವಡಿಕೆ, ನೀರುಣಿಸುವುದು, ಕಾವಲು, ಮೂರು ವರ್ಷಗಳ ನಿರ್ವಹಣೆ ಹಾಗೂ ಇತರೆ ವೆಚ್ಚಗಳನ್ನು ಸೇರಿ ಒಂದು ಸಸಿ ನೆಡುವ ಪ್ರಕ್ರಿಯೆಯಲ್ಲಿ ಸುಮಾರು 2,300 ರೂ. ವ್ಯಯವಾಗುತ್ತದೆ. ಬದಲಿ ಸಸಿ ನೆಡುವ ಕಡ್ಡಾಯ ಅರಣ್ಯೀಕರಣ ಯೋಜನೆಯಲ್ಲಿ ಪ್ರತಿ ಸಸಿಗೆ ಸುಮಾರು 3,108 ರೂ. ವೆಚ್ಚವಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಕೆಲಸ ಮಾತ್ರ ಸರಿಯಾಗಿ ಆಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.