ಹೊರ ವರ್ತುಲ ರಸ್ತೆಯ ಸರ್ವೀಸ್ ರಸ್ತೆ ಭಾಗದುದ್ದಕ್ಕೂ ಸಿ ಆ್ಯಂಡ್ ಡಿ ತ್ಯಾಜ್ಯ, ಗಿಡ-ಗಂಟಿಗಳು ಹಾಗೂ ಅನುಪಯುಕ್ತ ಸಾಮಗ್ರಿಗಳಿವೆ. ರೈಲ್ವೆ ಹಾಗೂ ಕೆ-ರೈಡ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮನ್ವಯದೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಪೂರ್ವ ಪಾಲಿಕೆ ಆಯುಕ್ತರಿಗೆ ಮಹೇಶ್ವರ ರಾವ್ ಸೂಚಿಸಿದರು. ಕಸ್ತೂರಿನಗರ ಮೇಲ್ಸೇತುವೆಯ ಕೆಳಭಾಗದ ರೈಲ್ವೆ ಹಳಿ ಬದಿಯಲ್ಲಿರುವ ತ್ಯಾಜ್ಯವನ್ನು ತೆರವುಗೊಳಿಸಿ, ಮತ್ತೆ ತ್ಯಾಜ್ಯ ಸುರಿಯದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಪೂರ್ವ, ಕೇಂದ್ರ ಪಾಲಿಕೆಗಳು, ಕೆ-&ರೈಡ್ ಹಾಗೂ ಮೆಟ್ರೋ ವತಿಯಿಂದ ಕೈಗೊಳ್ಳಬೇಕಿರುವ ಕಾಮಗಾರಿಗಳು ಮತ್ತು ಕಾರ್ಯಗಳ ವಿವರಗಳನ್ನು ಪಟ್ಟಿ ಮಾಡಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.